Mummy save me kannada movie review

ಕನ್ನಡದಲ್ಲಿ ಅತ್ಯದ್ಭುತ ಹಾರಾರ್ ಚಿತ್ರ – Mummy Save Me

Proud Kannadiga Rating : 3.5/5 Stars  [Mummy Save me Kannada movie review] 

ಮಮ್ಮಿ..!!!  ಈ ವಷ೯ದ ಹಾರರ್ ಸಿನಿಮಾಗಳ  ಹತ್ತರಲ್ಲಿ ಇದು ಒಂದು ಹಾರರ್ ಸಿನಿಮಾ ಎನ್ನದೇ, ನೋಡಿ ಭಯಪಡಬಹುದಾದಂತಹ ಉತ್ತಮ ಸಿನಿಮಾ.
 
ಸಿನಿಮಾದ ಮೊದಲಾಧ೯ ಹಾಲಿವುಡ್ ಸಿನಿಮಾ ದಂತಿದ್ದು, ಕಂಜ್ಯುರಿಂಗ್ ಮತ್ತು ಇನ್ನಿತರ ಸಿನಿಮಾಗಳ ಸ್ಫೂತಿ೯ ಕಂಡರು ಯಾವುದಕ್ಕೂ ಹೋಲಿಕೆ ಮಾಡುವ ತರಹ ಇಲ್ಲ,  ಯಾಕೆಂದರೆ ಇದು ನೈಜ ಘಟನೆಗಳ ಆಧಾರಿತ ಚಿತ್ರ,  ದ್ವಿತಿಯಾಧ೯ ದಲ್ಲಿ ಕಥೆ ಇಲ್ಲಿನ ನೇಟಿವಿಟಿಗೆ ಇದ್ದು ಕಥೆಗೆ ಪೂರಕವಾಗಿ ಚಿಕ್ಕ  ಫ್ಲ್ಯಾಶ್ ಬ್ಯಾಕ್ ಬಂದು ಹೋಗುತ್ತದೆ.

ನಿದೇ೯ಶಕರು ಚಿತ್ರದಲ್ಲಿ ಯಾವುದೇ ಅನಾವಶ್ಯಕ ಫ್ಲ್ಯಾಶ್ ಬ್ಯಾಕ್ ಹೇಳದೆ ಚಿತ್ರವನ್ನು ಒಂದು ನಿದಿ೯ಷ್ಟ ಚೌಕಟ್ಟಿನಲ್ಲಿ ಮಾಡಿರುವುದು ಚಿತ್ರದ ವೇಗವನ್ನು ಹೆಚ್ಚಿಸಿದೆ.  ಪ್ರತಿ ದೃಶ್ಯದಲ್ಲೂ ಪ್ರೇಕ್ಷಕ ನನ್ನೂ ಭಯ ಬೀಳಿಸುವ ತಂತ್ರಗಾರಿಕೆ ಎದ್ದು ಕಾಣುತ್ತದೆ. ಭಯದಿಂದ ಪ್ರೇಕ್ಷಕ ಸಿಳ್ಳೆ, ಕೇಕೆ ಹಾಕುವುದರ ಜೊತೆಗೆ, ಚಿತ್ರ ಪ್ರೇಕ್ಷಕ ನನ್ನೂ ಸೀಟಿನಲ್ಲಿ ಹಿಡಿದು ಕೂರಿಸುತ್ತದೆ..

ಒಂದು ಕುಟುಂಬ ಸಮುದ್ರ ಮತ್ತು ಕಾಡಿನ ಅಂಚಿನಲ್ಲಿರುವ ದೊಡ್ಡ ಬಂಗಲೆಗೆ ಬರುತ್ತದೆ. ಮಗುವಿಗೆ ತನ್ನ ಜೊತೆ ಆಟವಾಡಲು ಫ್ರೆಂಡ್ಸ್ ಯಾರು ಇರುವುದಿಲ್ಲ ಮತ್ತು ಅಜ್ಜಿ, ಅಮ್ಮ ,  ಚಿಕ್ಕಮ್ಮ ಯಾರೂ ಸರಿಯಾಗಿ ಕಾಳಜಿವಹಿಸದಿದ್ದಾಗ ಮಗುವಿಗೆ ಒಂದು ಭೂತ ಫ್ರೆಂಡ್ ಆಗುತ್ತದೆ. ನಂತರ ಅದರ ನಿಜವಾದ ಉದ್ಧೇಶ ತಿಳಿದು ಅದರಿಂದ ಹೇಗೆ ಪಾರಾಗುವುದು ಎಂದು ಕುಟುಂಬ ಚಿಂತಿಸುತ್ತದೆ,  ಕೊನೆ ತನಕ ಭಯ ಪಡಿಸುತ್ತ,  ಚಿತ್ರವನ್ನು ತುಂಬಾ ಎಳೆಯದೇ ನಿದೇ೯ಶಕರು ಬೇಗ ಮುಗಿಸಿದ್ದಾರೆ .
ಕ್ಲೈಮ್ಯಾಕ್ಸ್ ನಲ್ಲಿ ಪ್ರೇಕ್ಷಕರೂ ಭಯದಿಂದ ಹೊರಬಂದು ಕೊಂಚ ಫೀಲ್ ಆಗುತ್ತಾರೆ.

 ನಿದೇ೯ಶಕ ಲೋಹಿತ್ ತಮ್ಮ ಮೊದಲ ಚಿತ್ರದಲ್ಲೇ ಭರವಸೇ ಮೂಡಿಸಿದ್ದಾರೆ.  ಇನ್ನೂ ಚಿತ್ರದಲ್ಲಿ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಹಾರರ್ ಸಿನಿಮಾ ಎಂದಾಕ್ಷಣ ಚಿತ್ರದ ಹಿನ್ನೆಲೆ ಸಂಗೀತ ತುಂಬಾ ಮುಖ್ಯವಾಗಿರುತ್ತದೆ. ಅಜನೀಶ್ ಲೋಕನಾಥ್ ರ ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನೂ ಭಯ ಬೀಳಿಸುವಲ್ಲಿ ಸಫಲವಾಗಿದೆ.
ಕ್ಯಾಮರಮೆನ್ ವೇಣುರವರ ಕೈಚಳಕ,  ಅದ್ಭುತ ಲೈಟಿಂಗ್ ಪ್ರತಿ ಫ್ರೇಮ್ ನಲ್ಲೂ ಕಾಣುತ್ತದೆ.  ನಿದೇ೯ಶಕರು ಎಲ್ಲೂ ರಾಜಿ ಆಗದೆ ಚಿತ್ರವನ್ನು ಮಾಡಿರುವುದು ಮತ್ತು ಟೀಮ್ ನ ವಕ್೯  ತಾಂತ್ರಿಕವಾಗಿ ಸಿನಿಮಾ, ಹಾಲಿವುಡ್ ಗೂ ಕಮ್ಮಿ ಇಲ್ಲ  ಎನ್ನುವ ಆಗಿದೆ.
ನೋಟ್ ಬ್ಯಾನ್ಯಿಂದ  ಭಯ ಬಿದ್ದಿರುವ ಜನ, ಮಮ್ಮಿ ಭಯದಿಂದ ಸ್ವಲ್ಪ ರಿಲ್ಯಾಕ್ಸ್ ಆಗಬಹುದು. 

Review By : Naveen Karthru  

Watch trailer of kannada movie Mummy Save Me  

 

Mummy Save Me starring Priyanka Upendra directed by Lohith is running successfully across Karnataka and is all set to become a blockbuster Kannada horror movie for the year 2016. 

Also watch : 

DIEYANA HOUSE ಚಿತ್ರಕ್ಕೆ ರಘು ದೀಕ್ಷಿತ್ ಅವರ ಅದ್ಭುತ ಹಾಡು! – VIDEO NODI 

ಕನ್ನಡಿಗರಿಗೆ ಖಾಸಗಿ ಕ್ಷೇತ್ರದಲ್ಲೂ ಮೇಲುಗೈ ಸಾಧಿಸಲು ಮೀಸಲು – ತಪ್ಪದೇ ಶೇರ್ ಮಾಡಿ

Leave a Reply

Your email address will not be published. Required fields are marked *