Chikkanna kannada comedy

ಅನು ಶ್ರೀ ಮೇಲೆ ಚಿಕ್ಕಣನಿಗೆ ಲವ್!!!

ಚಿಕ್ಕಣ್ಣ!!!  ಹೆಸರು ಕೇಳುತ್ತಿದ್ದ ಹಾಗೆ ಸಣಕಲು ದೇಹ, ಗುಂಗುರು ಕೂದಲು, ಯಾವಗಲೂ ನಿದ್ದೆ ಮಂಪರಿನಲ್ಲಿ ಇರುವಂತೆ ಕಾಣುವ ಕಣ್ಣಗಳು, ಬಾಯಲ್ಲಿ  ಮಂಡ್ಯ ಮೈಸೂರು ಕಡೆಯ ಭಾಷೆ, ಸಂಪೂರ್ಣ ದೊಡ್ಡಣ್ಣನಿಗೆ ವಿರುದ್ಧವಾಗಿ ಕಾಣುವ ಚಿಕ್ಕಣ್ಣನ ರಚನೆ ಕಣ್ಮುಂದೆ ಬರುತ್ತದೆ. ಚಿಕ್ಕಣ್ಣ ತಮ್ಮ ಹಾಸ್ಯ ಪ್ರಜ್ಞೆ, ಆಂಗಿಕ ಭಾಷೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತ ಬಂದಿದ್ದಾರೆ. ಇಂತಹ ಚಿಕ್ಕಣ್ಣ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರಿಗಿಂತ ಹೆಚ್ಚು ಬಿಝಿ಼ ಇದ್ದಾರೆ ಎಂದರೆ ನಂಬಲೇಬೇಕು. ಸಿನಿಮಾ ಎಂದ ಮೇಲೆ ಅಲ್ಲಿ ಗಾಸಿಪ್ಸ್ ಗಳು, ನಟ ನಟಿಯರ ನಡುವೆ ಪ್ರೇಮ ಕಥೆಗಳು, ರೊಮ್ಯಾನ್ಸ್ ಗಳು ಸಾಮಾನ್ಯ. ಸಧ್ಯ ಚಿಕ್ಕಣ್ಣನ ಹೆಸರು ಅನು ಶ್ರೀ  ಜೊತೆ ಕೇಳಿ ಬರುತ್ತಿದೆ.  
 
 
 ಡಿಸೆಂಬರ್ 25 ರಂದು ದಾವಣಗೆರೆಯಲ್ಲಿ ಹೆಬ್ಬುಲಿ  ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಿತು . ಚಿತ್ರದ ಧ್ವನಿ ಸುರುಳಿ ಹಕ್ಕುಗಳನ್ನು ಝಿ ತೆಗೆದುಕೊಂಡಿದೆ. ಸಮಾರಂಭದ ನಿರೂಪಣೆಯನ್ನು  ಕಿರುತೆರೆ ಖ್ಯಾತಿಯ ಅನುಶ್ರೀ ವಹಿಸಿಕೊಂಡಿದ್ದರು. ರವಿಶಂಕರ್, ರವಿಚಂದ್ರನ್, ಸುದೀಪ್, ಹರಿಪ್ರಿಯಾ, ಚಿಕ್ಕಣ್ಣ  ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನೀರ್ ದೋಸೆ ನಟಿ ಹರಿಪ್ರಿಯಾ ಸುದೀಪ್ ಹಾಡುಗಳಿಗೆ ನೃತ್ಯ  ಮಾಡಿ ರಂಜಿಸಿದರೆ,  ಸುದೀಪ್  ಬೇರೆಯವರನ್ನು  ಕಾಲೇಳೆದು ತಮಾಷೆ ಮಾಡುವ ಮೂಲಕ ಪ್ರೇಕ್ಷಕರನ್ನು ನಗುವಿನಲ್ಲಿ  ತೇಲಿಸಿದರು . ರವಿಶಂಕರ್ ಮೊದಲ ಬಾರಿಗೆ ಕೆಂಪೇಗೌಡ ಚಿತ್ರದ ಆರ್ಮುಗಂ ಕೋಟೆ ಸಂಭಾಷಣೆಯನ್ನು ಹೇಳದೆ, ಮೂಕಭಿನಯದ ಮೂಲಕ ತೋರಿಸಿದರು.  ಚಿಕ್ಕಣ್ಣ ವಿಷ್ಣು ರವರ ಅಭಿಮಾನಿಯಾಗಿ  ನೃತ್ಯ  ಮಾಡಿ, ಜೊತೆಗೆ  ತಮ್ಮ ಸಿನಿಮಾದ  ಹಲವು ಹಾಸ್ಯ ಸಂಭಾಷಣೆಗಳನ್ನು  ಹೇಳುವ ಮೂಲಕ ಪ್ರೇಕ್ಷಕರ ಶಿಳ್ಳೆ, ಕೇಕೆಗಳಿಗೆ ಒಳಗಾದರು.  ಚಿಕ್ಕಣ್ಣ ಯಾವುದೇ ಸಮಾರಂಭಕ್ಕೆ ಹೋದರೂ ಬೇರೆಯವರನ್ನು  ಕಾಲೇಳೆದು ಮನರಂಜನೆ ನೀಡುತ್ತಾರೆ. ಹೀಗೆ ಹೆಬ್ಬುಲಿ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲೂ  ನಿರೂಪಕಿ ಅನುಶ್ರೀ ಜೊತೆ ಚಿಕ್ಕಣ್ಣ  ಮಾತನಾಡಲು ಶುರುವಾದಾಗ, ಎಲ್ಲರ ಸಮ್ಮುಖದಲ್ಲೆ  ಅನುಶ್ರೀ ಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ಚಿಕ್ಕಣ್ಣ  ಇದೆ ರೀತಿ ಕೆಲವು ಸಮಾರಂಭ ಮತ್ತು ರಿಯಾಲಿಟಿ ಶೋ ಗೆ ಬಂದಾಗ ಅನುಶ್ರೀ ಗೆ ಪ್ರೇಮ ನಿವೇದನೆ ಮಾಡಿದ್ದರು. ಈ ಎಲ್ಲ ಬೆಳವಣಿಗೆ ಗಮನಿಸುವುದಾದರೆ ನಿಜವಾಗಲೂ ಚಿಕ್ಕಣ್ಣ, ಅನುಶ್ರೀ ನಡುವೆ ಪ್ರೇಮಾಂಕುರ ಆಗಿದೆಯ ಎನಿಸುತ್ತದೆ ಮತ್ತು ಮೊದಲೆ ಇಬ್ಬರ ಬಗ್ಗೆ ಗೊತ್ತಿರುವವರು ತಮಾಷೆ ಕೂಡ ಇರಬಹುದು ಎಂದುಕೊಳ್ಳುತ್ತಿದ್ದಾರೆ. ಅನುಶ್ರೀ ಕೂಡ ಝೀ ವಾಹಿನಿಯಲ್ಲಿ  ಪ್ರಸಾರವಾಗುವ ಸ. ರಿ.ಗ. ಮ.ಪ ಲಿಟ್ಲ್ ಚಾಂಪ್ ಶೋ ನಲ್ಲಿ ಆವಾಗವಾಗ ಸಂಗೀತ ನಿರ್ದೇಶಕ ಅಜು೯ನ್ ಜನ್ಯ ರ ಜೊತೆ  ಫ್ಲಟ್೯ ಮಾಡುತ್ತಾ ಇರುತ್ತಾರೆ.  ಚಿಕ್ಕಣ್ಣನ ಪ್ರೇಮ ನಿವೇದನೆಯನ್ನು  ಅನುಶ್ರೀ ಸಿರಿಯಸ್ ಆಗಿ ತೆಗೆದುಕೊಂಡಿದ್ದಾರೊ ಅಥವಾ ಇಬ್ಬರು ತಮಾಷೆ ಮಾಡಿದರೋ ಅವರಿಗೆ ಗೊತ್ತಿರಬೇಕು.  ಗಾಂಧಿನಗರದಲ್ಲಿ  ಜನ ಹಲ್ಲಿ ಹೋದರೆ, ಹಾವು ಹೋದಂತೆ ಮಾತನಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಸಧ್ಯ ಈ ವಿಚಾರ ಸುದ್ದಿ ಮಾಧ್ಯಮಗಳಲ್ಲಿ , ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಇದ್ದವರ ತಲೆಯಲ್ಲಿ ಹರಿದಾಡುತ್ತಿದೆ. 
Author : Naveen Karthru 
 

BIGG BOSS KANNADA MALAVIKA & PRATHAM 

ಇಡೀ ಭಾರತ ಮೆಚ್ಚಿದ ಕನ್ನಡದ ನಿರ್ದೇಶಕರು 

Leave a Reply

Your email address will not be published. Required fields are marked *