Kadle Kai parishe Bangalore , basavanagudi

ಬಡವರ ಬಾದಾಮಿ ಕೊಳ್ಳುವ ಹರುಷ – ಕಡಲೇ ಕಾಯಿ ಪರಿಷೆ

ಕಡ್ಲೆಕಾಯಿ, ಖಾರ ಹಾಗು ಹುಳಿ ಹಿಂದಿರುವ ಜೋಳ , ಪಿಂಗಾಣಿ ಗೊಂಬೆಗಳು , ಗರಿ ಗರಿ ಆಲೂ ಚಿಪ್ಸ್ , ಚಳಿಗಾಲದ ಉಡುಪುಗಳ  ಮಾರಾಟ , ತಲೆಯ ಮೇಲೆ ಹಾರಾಡುತ್ತಿರುವ ಹೆಲಿಕ್ಯಾಪ್ಟರ್ , ಕಬ್ಬಿಣ ರಸ, ಗಾಳಿಯ ಜೊತೆ ತೂರಾಡುತ್ತಿರುವ ಬಬ್ಬಲ್ಸ್ , ಕಾಟನ್ ಕ್ಯಾಂಡಿ, ,ಮಿನಿ  ಕೊಲಂಬಸ್, ಗಾಂಧಿ ತಾತ  ವೇಷ ಧರಿಸಿ ನಿಂತುರುವ ಮನುಷ್ಯ, ಅಲ್ ಅಲ್ಲಿ ಮನರಂಜನಾ ಆಟಗಳು,ತಂಪು ಪಾನೀಯಗಳು, ಹೆಂಗಸರ ಶಾಪಿಂಗ್ ಮಳಿಗೆಗಳು, ಮಕ್ಕಳನ್ನ ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿರುವ  ತಂದೆಯರು,ಸೊಗಸಾದ ಕೊಳಲುವಾದನೆಯ ಮಾರಾಟಗಾರರು  ಇವೆಲ್ಲವೂ ಯಾವ ವಿಘ್ನೇ ಇಲ್ಲದೆ ನಡೆಯುವಂತೆ  ನೋಡಿಕೊಳ್ಳುವ ಬಸವನಗುಡಿಯ ದೊಡ್ಡ ಗಣೇಶ.
 
ಈ ವಾತಾವರಣವನ್ನು ನೀವು ಅನುಭವಿಸ್ಸಿದ್ದರೆ  ಖಂಡಿತವಾಗಿಯೂ ಅದು ನಮ್ಮಕಡ್ಲೆಕಾಯಿ ಪರಿಷೆಯಲ್ಲಿ ಮಾತ್ರ ಸಾಧ್ಯ. ಬೆಂಗಳೂರಿನ ಬಸವನಗುಡಿಯ ಕಡ್ಲೇಕಾಯಿ ಪರಿಷೆಗೆ ತನ್ನದೇ ಇತಿಹಾಸವಿದೆ. ಕಾರ್ತೀಕ ಮಾಸದ ಕೊನೆಯ ಸೋಮವಾರದಂದು ನಡೆಯುವ ಪರಿಷೆಗೆ ಲಕ್ಷಾಂತರ ಜನರು ಪಾಲ್ಗೊಂಡು ಸಂಭ್ರಮಿಸುತ್ತಾರೆ
 
Bangalore festival for ground nuts ೧೫೩೭ರಲ್ಲಿ  ಬೆಂಗಳೂರಿನ ಸ್ಥಾಪಕರಾದ ಕೆಂಪೇ ಗೌಡರಿಗೆ  ಬಸವನ  ವಿಗ್ರಹ ದೊರಕಿದ ನಂತರ,  ಅವರು ಒಂದು ದೇವಾಲಯವನ್ನು ದೊಡ್ಡ ಬಸವನಿಗೆ, ಬಸವನಗುಡಿಯ ದಿಣ್ಣೆಯ ಮೇಲೆ ಪ್ರತಿಷ್ಟಾಪನೆ ಮಾಡಿದರು. ಇಂದು ಈ ದೇವಾಲಯವನ್ನು "ಬುಲ್ ಟೆಂಪಲ್"ಎಂದು ಕರಿಯುತ್ತಾರೆ.ಅಂದಿನಿಂದ ಇಲ್ಲಿಯ ವರೆಗೂ ಸುತ್ತಮುತ್ತಲ್ಲ ಹಳ್ಳಿಗಳಿಂದ ಹಾಗು ರಾಜ್ಯಗಳಿಂದ ರೈತರು ತಮ್ಮ ಕಡ್ಲೆಯ ವಾರ್ಷಿಕ ಸುಗ್ಗಿಯನ್ನು ಮೊದುಲು ಬಸವನಿಗೆ ಅರ್ಪಿಸುತ್ತಾರೆ.
 
 
 
 
 
 
ಈ ಮೊದಲು, ಸುಂಕೇನಹಳ್ಳಿ , ಗುಟ್ಟಹಳ್ಳಿ, ಮಾವಳ್ಳಿ ಹಾಗು ದಾಸರಹಳ್ಳಿ, ಬಸವನಗುಡಿಯ ಸುತ್ತಮುತ್ತಲಿನ ಹಳ್ಳಿಗಳಾಗಿದ್ದವು. ಪ್ರತಿ ಹುಣ್ಣಿಮೆದಿನದಂದು, ಒಂದು ಬಸವ  ಕಡ್ಲೆಕಾಯಿ ಹೊಲಕ್ಕೆ ನುಗ್ಗಿ ಬೆಳೆ ನಾಶ ಮಾಡುತ್ತಿತ್ತು. ಆಗ ರೈತರು ಬಸವನಿಗೆ (ನಂದಿ)ಪ್ರಾರ್ಥನೆ ಸಲ್ಲಿಸಿ, ಅಂದಿನಿಂದ ಅವರ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸುವುದರ ಹರಿಕೆ ಹೊತ್ತುಕೊಂಡರು.  
 
Article By : Akshay Bharadwaj 
 
ಇದನ್ನು  ಮರೆಯದೆ ಓದಿರಿ: 
 
 
 

One Comment

Leave a Reply

Your email address will not be published. Required fields are marked *