bigg-boss-kannada-winner-02

ಈ ಬಾರಿಯ ಬಿಗ್ ಬಾಸ್ ನ ವಿನ್ನರ್ ಯಾರು? – Bigg Boss Kannada Winner ?

ಅಂತೂ ಇಂತೂ ಹುಚ್ಚರ ಸಂತೆ ಬಿಗ್ ಬಾಸ್ ಕೊನೆಯ ಹಂತಕ್ಕೆ ಬಂದಿದೆ. ಪ್ರೇಕ್ಷಕರು ಮತ್ತು ಬಿಗ್ ಬಾಸ್ ಅಭಿಮಾನಿಗಳು ಶೋ ಪ್ರಾರಂಭವಾದ ಕ್ಷಣದಿಂದಲೂ ಯಾರು ಗೆಲ್ಲಬಹುದೆಂಬ ಲೆಕ್ಕಚಾರ ಶುರುವಾಗಿತ್ತು. ಇದೀಗ ಫೈನಲ್ ಹಂತಕ್ಕೆ ತಲುಪಿದ್ದು ಕುತೂಹಲದ ಕ್ಷಣಗಳು ಮುಗಿಯುವ ಹಂತಕ್ಕೆ ಬಂದಿದೆ. ಬಿಗ್ ಬಾಸ್ ಮನೆಯ ಸ್ಪಧಿ೯ಗಳ ಗೆಲ್ಲುವ ಹಪಾಹಪಿ ಹೆಚ್ಚಾಗಿದೆ.  ಬಿಗ್ ಬಾಸ್ ಮನೆ ಖಾಲಿ ಆಗುತಿದ್ದಂತೆ ಕಿತ್ತಾಟಗಳು, ಗಲಾಟೆಗಳು ಕಡಿಮೆ ಆಗಿದೆ. ಶುರುವಿನಿಂದಲೂ ಟಾಸ್ಕ್ ಗಿಂತ ಹೆಚ್ಚಾಗಿ ಕಿತ್ತಾಟ, ಕಿರುಚಾಟಗಳೇ ಹೆಚ್ಚಾಗಿದ್ದ ಬಿಗ್ ಬಾಸ್ ನಲ್ಲಿ ಈ ಬಾರಿ ಅಷ್ಟು ವಿಶೇಷವೇನು ಇರಲಿಲ್ಲ. ಈ ಹಿಂದಿನ ಮೂರು ಸೀಸನ್ ನಲ್ಲಿ ಜನರು ಗೆಲ್ಲಬಹುದೆಂದು ಊಹಿಸಿದ್ದ ಸ್ಪಧಿ೯ಗಳು ಫೈನಲ್ ತನಕ ಬಂದು ಸೋತಿದ್ದರು. ಮೊದಲ ಸೀಸನ್ ನಲ್ಲಿ ಅರುಣ್ ಸಾಗರ್ ಗೆಲ್ಲಬಹುದೆಂಬ ಲೆಕ್ಕಚಾರ ಇತ್ತು ಆದರೆ ವಿಜಯರಾಘವೇಂದ್ರ ವಿನ್ನರ್ ಆಗಿದ್ದರು. ಹಾಗೆಯೇ ಎರಡನೇ ಸೀಸನ್ ನಲ್ಲಿ ಸೃಜನ್ ಬದಲು ಅಕುಲ್ ಮತ್ತು ಮೂರನೇ ಸೀಸನ್ ನಲ್ಲಿ ಯಾವುದೇ ನಿರೀಕ್ಷೆ ಇರದ ಶೃತಿ ಗೆದ್ದಿದ್ದರು.  
Bigg boss kannada winner 2017
 ಕಳೆದ ಬಾರಿಯ ಸೀಸನ್ ಗಳಿಗೆ ಹೋಲಿಸಿದರೆ ಈ ಬಾರಿ ಸ್ಪಧಿ೯ಗಳು ಕಳಪೆ ಆಗಿದ್ದಾರೆ.  ಈ ಬಾರಿ ಕಮಾಂಡರ್ ಮತ್ತು ದೋಭಿ ಘಾಟ್ ಟಾಸ್ಕ್ ಗಳನ್ನು ಹೊರತು ಪಡಿಸಿದರೆ, ಇನ್ನೂಳಿದಂತೆ ಎಲ್ಲ ಟಾಸ್ಕ್ ಗಳು ಅದೆ ಹಳೆಯ ಟಾಸ್ಕ್ ಗಳು ಆಗಿದ್ದವು. ಈ ಬಾರಿ ಹೆಚ್ಚು ಗಮನ ಸೆಳೆದಿದ್ದು ಎರಡನೇ ಹುಚ್ಚ ವೆಂಕಟ್ ಎಂದು ಖ್ಯಾತಿ ಆಗಿರುವ ಪ್ರಥಮ್. ಮೊದಲ ದಿನವೇ ತನ್ನ ವಿಚಿತ್ರ ಮಾತುಗಳಿಂದ ಗಮನ ಸೆಳೆದಿದ್ದ ಪ್ರಥಮ್ ಜನರಿಗೆ ಬಿಟ್ಟಿ ಮನರಂಜನ ವ್ಯಕ್ತಿ ಆಗಿದ್ದರು. ಜನರಿಗೆ ಹುಚ್ಚರ ರೀತಿ ಆಡುವವರು ಇಷ್ಟವಾಗುತ್ತಾರೆ ಎಂದು ಪದೇ ಪದೇ ನಿರೂಪಿಸುತ್ತಾ ಬಂದಿದ್ದಾರೆ. ಈ ಬಾರಿ ಫೈನಲ್ ರೇಸ್ ನಲ್ಲಿ ಮುಖ್ಯವಾಗಿ ಮೂರು ಜನ ಕಣ್ಣಿಗೆ ಬೀಳುತ್ತಾರೆ. ಮೊದಲ ಸ್ಥಾನದಲ್ಲಿ ರೇಖಾ, ನಂತರ ಶಾಲಿನಿ ಮತ್ತು ಕೀತಿ೯ ಸ್ಪಧೆ೯ಯಲ್ಲಿದ್ದಾರೆ. ಬಿಗ್ ಬಾಸ್ ಶುರುವಾದಾಗ ಕೆಲವರಿಗೆ ಮೋಹನ್ ಅಥವಾ ಮಾಳವಿಕ ಗೆಲ್ಲಬಹುದೆಂಬ ಮಾತುಗಳು ಕೇಳಿ ಬರುತ್ತಿದ್ದವು.  ಆದರೆ ಅವರು ಟಾಸ್ಕ್ ಗಿಂತ ಹೆಚ್ಚಾಗಿ ಅನಾವಶ್ಯಕ  ಗಲಾಟೆಗಳಲ್ಲಿ,  ಅಸಂಬಧ್ದ ಮಾತುಗಳಲ್ಲಿ ಮಗ್ನರಾಗಿದ್ದರು. ಆದ್ದರಿಂದ ಅವರ ಮೇಲಿದ್ದ ನಿರೀಕ್ಷೆ ಎನ್ನುವುದಕ್ಕಿಂತ,  ಒಂದು ಯೋಚನೆ ಈವಾಗ ಇಲ್ಲ. ಕೀತಿ೯ಯೂ ಕೂಡ ಪ್ರಥಮ್ ಹವಾದಿಂದ ಸ್ವಲ್ಪ ಗಮನ ಸೆಳೆಯುವಲ್ಲಿ ಅಷ್ಟು ಯಶಸ್ವಿ ಆಗಿಲ್ಲ.  ಶಾಲಿನಿ ಮೊದಲು ಕ್ರಿಯಾಶೀಲ ರಾಗಿದ್ದವರು ಕೊನೆಯ ಹಂತದಲ್ಲಿ ಸ್ವಲ್ಪ ಡಲ್ ಆಗಿದ್ದಾರೆ.  ಹಿಂದಿನ ಸೀಸನ್ ಗಳನ್ನು ಗಮನಿಸಿದರೆ ಮನರಂಜನೆ ಕೊಟ್ಟವರಿಗಿಂತ,  ಟಾಸ್ಕ್ ನಲ್ಲಿ ಗಮನ ಸೆಳೆದವರಿಗಿಂತ ಮೂಕರಂತೆ ಎಲ್ಲವನ್ನು ಸಹಿಸಿಕೊಂಡು ಭಾಗವಹಿಸಿದವರು ವಿನ್ನರ್ ಆಗಿದ್ದರು.  ಆ ದೃಷ್ಟಿಯಲ್ಲಿ ನೋಡಿದರೆ ರೇಖಾ ಗೆಲ್ಲುವ ಲಕ್ಷಣಗಳು ಕಾಣಿಸುತ್ತಿದೆ. ಆದರೂ ಬಿಗ್ ಬಾಸ್ ಲೆಕ್ಕಚಾರ ತಿಳಿಯಲು ಇನ್ನೂ ಒಂದು ವಾರ ಕಾಯಬೇಕು. 
Author : Naveen Karthru 
 
Most popular TV Show Bigg Boss kannada hosted by namma kiccha sudeep is towards its end. This is the time to decide who is the winner of Bigg boss kannada season 04. Most popular contestants in Bigg boss kannada season 04 till now are Pratham, Shalini, Kirik Keerthi, and Malavika. Guess the winner of Bigg boss kannada and post your comments below. 
 

ಆರ್. ಸಿ. ಬಿ. ಆಟಗಾರ ಬೇಬಿ, ಅನ್ನಾಗೆ ಮೈದಾನದಲ್ಲೇ ಬೋಲ್ಡ್ – ವೈರಲ್ ವಿಡಿಯೋ 

ಭಾರತದಲ್ಲಿ ಹೆಬ್ಬುಲಿಗೆ ಮೂರನೇ ಸ್ಥಾನ!!! 

7 Comments

Leave a Reply

Your email address will not be published. Required fields are marked *