Pratham Malavika Biggboss kannada

ರಹಸ್ಯ ಕೋಣೆಯಲ್ಲಿ ಮಾಳವೀಕ ಮತ್ತು ಪ್ರಥಮ್ ಮಧ್ಯೆ ಜಟಾಪಟಿ – Bigg Boss Kannada Malavika & Pratham

loading...
ಬಿಗ್ ಬಾಸ್ ಹವಾ ದಿನೇ ದಿನೇ ಕಡಿಮೆ ಆಗುತ್ತಿದ್ದಂತೆ , ಬಿಗ್ ಬಾಸ್ ಮನೆಯಲ್ಲಿ ಕಿತ್ತಾಟಗಳು, ಜಗಳಗಳು ಜಾಸ್ತಿ ಆಗುತ್ತಿವೆ. ಮೊದ ಮೊದಲು ಸ್ವಾಸ್ಥ್ಯ ರಂತೆ ಇದ್ದ ಶಾಲಿನಿ ಕೂಡ  ಕೊನೆಯಲ್ಲಿ  ಹುಚ್ಚಾಟ ಶುರವಿಟ್ಟುಕೊಂಡಿರುವಂತಿದೆ.  ಇನ್ನೇನು ಒಂದು ವಾರದಲ್ಲಿ  ಶೋ ಮುಗಿಯುವ ಖುಷಿಯಲ್ಲಿದ್ದ  ಧಾರಾವಾಹಿ  ಹೆಂಗಳೆಯರು  ಕಣ್ಣೀರಿಡಲು ಪ್ರಾರಂಭಿಸಿದ್ದಾರೆ. 
 
ಬಿಗ್ ಬಾಸ್ ಶೋ ಪ್ರಾರಂಭವಾಗಿ ಮೂರು ತಿಂಗಳು ಕಳೆದರೂ ಕೆಲವರು ಮತ್ತೆ  ಮನೆಗೆ ಬಂದು, ದೊಡ್ಡಿಯಂತೆ  ತುಂಬಿಕೊಂಡಿರುವುದು ಕೆಲವು  ವೀಕ್ಷಕರಿಗೆ  ಕಿರಿ ಕಿರಿ ಉಂಟು ಮಾಡಿದೆ.  
 
 
 
ಬಿಗ್ ಬಾಸ್ ನಿಯಮದ ಪ್ರಕಾರ ಪ್ರತಿ ವಾರ ನಾಮಿನೇಷನ್ ಪ್ರಕ್ರಿಯೆ ಇರುತ್ತದೆ. ಎಂದಿನಂತೆ  ಕಳೆದ  ವಾರ ನಾಮಿನೇಷನ್ ಪ್ರಕ್ರಿಯೆ ಇದ್ದರೂ, ವೀಕ್ಷಕರೂ  ಸ್ಪಧಿ೯ಗಳನ್ನು  ಉಳಿಸಲು ಮತ ಹಾಕುವ ಪ್ರಕ್ರಿಯೆ  ಇರಲಿಲ್ಲ.  ಕೆಲವು ಬುಧ್ದಿವಂತ  ವೀಕ್ಷಕರೂ ಇದನ್ನು ನೋಡಿ  ಈ ವಾರ  ಏನೋ  ಟ್ವಿಸ್ಟ್  ಇರಬಹುದೆಂಬ ಲೆಕ್ಕಚಾರ ಹಾಕಿದ್ದರು. ಇನ್ನೂ ಕೆಲವರಿಗೆ ಈ ವಾರ ಮನೆಯಿಂದ ಯಾರು ಹೊರ ಹೊಗಬಹುದೆಂಬ ಕುತೂಹಲ ಇದ್ದಿತ್ತು. 
 
ಬಿಗ್ ಬಾಸ್ ಶನಿವಾರ ಮಾಳವೀಕ ಮತ್ತು ಪ್ರಥಮ್  ಇಬ್ಬರನ್ನು  ಹೊರ ಹಾಕುವ ಮೂಲಕ ವೀಕ್ಷಕರ ಕುತೂಹಲ ತಣಿಸಿದ್ದರು. ಆ ಕುತೂಹಲಕ್ಕೆ ಮತ್ತೊಂದು ಟ್ವಿಸ್ಟ್ ಕೊಡುವ ಮೂಲಕ ವೀಕ್ಷಕರಿಗೆ  ಶಾಕ್ ಕೊಟ್ಟಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮಾಳವೀಕ ಮತ್ತು ಪ್ರಥಮ್ ರನ್ನು ನೇರವಾಗಿ ರಹಸ್ಯ ಕೋಣೆಗೆ ಕಳುಹಿಸಿದ್ದರು. 
 
ನಿಯಮದ ಪ್ರಕಾರ ರಹಸ್ಯ ಕೋಣೆಯಲ್ಲಿ, ಬಿಗ್ ಬಾಸ್ ಮನೆಯಲ್ಲಿ ಉಳಿದ  ಸ್ಪಧಿ೯ಗಳು ಏನೇನು  ಮಾಡುತ್ತಾರೆ,  ಯಾರು ಯಾರ ಬಗ್ಗೆ ಏನೇನು ಮಾತನಾಡುತ್ತಾರೆ ಎಂಬ ವಿಷಯ ತಿಳಿದುಕೊಳ್ಳಲು  ವ್ಯವಸ್ಥೆ ಮಾಡಿರಲಾಗುತ್ತದೆ. 
 
 
 
ಪ್ರಥಮ್ ಮತ್ತು ಮಾಳವೀಕ ರಹಸ್ಯ ಕೋಣೆಯಲ್ಲಿ ಇದ್ದು,  ಉಳಿದ ಸ್ಪಧಿ೯ಗಳು ತಮ್ಮ ಬಗ್ಗೆ  ಏನೇನು ಮಾತನಾಡಿಕೊಳ್ಳುತ್ತಾರೆ ಎಂಬುದನ್ನು ಕೇಳಿಸಿಕೊಳ್ಳುತ್ತಿದ್ದಾರೆ. ಮನೆಯಲ್ಲಿರುವ ಸ್ಪಧಿ೯ಗಳು  ಕೂಡ ಇವರಿಬ್ಬರ ಕುರಿತು ನಕರಾತ್ಮಕ ಧೋರಣೆಯನ್ನು ಹೊರ ಹಾಕುತ್ತಿರುವುದು, ಇಬ್ಬರಿಂದಲೂ ಕೇಳಿ ಸಹಿಸಿಕೊಳ್ಳಲು ಆಗುತ್ತಿಲ್ಲ.  ಅಲ್ಲದೆ ಇದೆ ವಿಷಯವಾಗಿ ಇಬ್ಬರು ವಿಚಾರವಂತರು  ಪರಸ್ಪರ ಜಗಳ ಮಾಡಿಕೊಳ್ಳುತ್ತಿದ್ದಾರೆ. 
 
ಮಾಳವೀಕ ಪ್ರಥಮ್ ಬಗ್ಗೆ ಫೈನಲ್ ಗೆ ಹೋಗುವ ವಿಚಾರದ ಬಗ್ಗೆ ನಕರಾತ್ಮಕವಾಗಿ ಮಾತನಾಡಿದ್ದು ' ನೀನು ಏನೇ ಮಾಡಿದ್ರೂ ಈ ಬಾರಿ ಬಿಗ್ ಬಾಸ್ ವಿನ್ನರ್ ಆಗುವುದಕ್ಕೆ ಸಾಧ್ಯವೇ ಇಲ್ಲ, ಬೇಕಾದರೆ ಈಗಲೇ ಪೇಪರ್  ಮೇಲೆ  ಬರೆದು ಕೊಡುತ್ತೇನೆ'  ಎಂದು ಕೆಣಕಿದ್ದಾರೆ. 
 
ಈ ವಿಚಾರವಾಗಿ ನೇರವಾಗಿ ಖಂಡಿಸಿ ಪ್ರತಿಭಟನೆ ಮಾಡಲು ಮುಂದಾದ ಪ್ರಥಮ್ ಮಾಳವೀಕಗೆ ಟಾಂಗ್ ಕೊಟ್ಟಿದ್ದಾರೆ, ' ನನ್ನ ಏನ್ ಅಂದುಕೊಂಡಿದ್ದಿರಾ ನೀವು?  ನಾನ್ ಇಲ್ಲಿ 13 ವಾರ ಇದೇನೆ ಅಂದ್ರೆ ಸುಮ್ಮನೇ ಇಲ್ಲ, ಅದು ಜನ ಕೊಟ್ಟಿರೋ ಪ್ರೀತಿ,  ನಾನ್ ವಿನ್ನರ್ ಆಗಲ್ಲ ಅಂತ ನೀವು ಹೇಗೆ ಹೇಳ್ತಿರಾ,  ನೀವು ಏನ್ ಬಿಗ್ ಬಾಸಾ?  ಎಂದು ತರಟೆಗೆ ತೆಗೆದುಕೊಂಡಿದ್ದಾರೆ. 
 
ಸಧ್ಯ ಈ ಜಗಳ ಇನ್ನೂ ಒಂದು ವಾರ ಹೀಗೆ ಮುಂದುವರಿಯುವ ಸಾಧ್ಯತೆಗಳು ಇದೆ. ಜನರು ಮನೆಯ ಅಕ್ಕ-ಪಕ್ಕ  ಬೀದಿಯಲ್ಲಿ ಜಗಳವಾದರೆ ನೋಡುತ್ತಾ ಮಜಾ ತೆಗೆದುಕೊಳ್ಳುತ್ತಿದ್ದವರು ,  ಈಗ ಮನೆಯಲ್ಲೆ  ಬಿಗ್ ಬಾಸ್ ನೋಡಿ ಮಜಾದ ಜೊತೆ ಇರುಸು ಮುರುಸುಗೊಳ್ಳುತ್ತಿದಾರೆ.  
Author : Naveen Karthru 
Thanks for reading this article about Bigg Boss Kannada Controversy between Pratham and Malavika in proudkannadiga.com Stay tuned for more updates.  
 

LATE OM PURI’S FIRST MOVIE WAS IN KANNADA 

KICCHA SUDEEP WIFE – PRIYA SUDEEP – REUNITE! 

loading...

Leave a Reply

Your email address will not be published. Required fields are marked *