Kiccha Sudeep Hebbuli Kannada

ಭಾರತದಲ್ಲಿ ಹೆಬ್ಬುಲಿಗೆ ಮೂರನೇ ಸ್ಥಾನ!!!

ಹೆಬ್ಬುಲಿಯ ಘಜ೯ನೆ ಭಾರತದಾದ್ಯಂತ  ಹಬ್ಬಿದೆ.  ಒಂದು ಪೋಸ್ಟರ್, ಒಂದು ಹೇರ್ ಸ್ಟೈಲ್, ಒಂದು ಲುಕ್ ಇಷ್ಟೆಲ್ಲ ಕ್ರೇಜ್ ಗೆ ಕಾರಣವಾಗಿದೆ ಎಂದರೆ ನಂಬಲೇಬೇಕು. ಸುದೀಪ್ ರ ಯಾವ ಸಿನಿಮಾವು ಈ ರೀತಿಯ ಒಂದು ಕ್ರೇಜ್ ಹುಟ್ಟು ಹಾಕಿರಲಿಲ್ಲ.  ಅಂತಹ ಒಂದು ಕ್ರೇಜನ್ನು ಕನ್ನಡ ಸಿನಿಮಾ ಅಭಿಮಾನಿಗಳು ಮತ್ತು ಸುದೀಪ್ ಅಭಿಮಾನಿಗಳಲ್ಲಿ ಹುಟ್ಟು ಹಾಕಿದೆ. 
 
ಬಾಲಿವುಡ್ ಸಿನಿಮಾಗಳು ಎಂದರೆ ಸಾಮಾನ್ಯವಾಗಿ ಅವುಗಳ ಮಾಕೆ೯ಟ್ ದೊಡ್ಡದಿರುತ್ತದೆ . ವಿದೇಶದಲ್ಲೂ ಬಾಲಿವುಡ್ ಮಾಕೆ೯ಟಿಂಗ್ ವಿಸ್ತಾರ ದೊಡ್ಡದಿದೆ. ಅಮೀರ್ ಖಾನ್ ಮತ್ತು ಶಾರುಖ್ ಖಾನ್ ಇಬ್ಬರು ಬಾಲಿವುಡ್ ನ ಸ್ಟಾರ್ ನಟರು. ಅವರ ಸಿನಿಮಾಗಳ ಬಗ್ಗೆ ಲಕ್ಷಾಂತರ ಜನ ಇಂಟರ್‌ನೆಟ್ ನಲ್ಲಿ ಹುಡುಕುತ್ತಾ ಇರುತ್ತಾರೆ.   ಆದರೆ ಬಾಲಿವುಡ್ ಹೋಲಿಸಿದರೆ ಕನ್ನಡ ಸಿನಿಮಾಗಳ ಮಾಕೆ೯ಟಿಂಗ್ ಚಿಕ್ಕದು. ಕನ್ನಡ ಸ್ಟಾರ್ ನಟರಲ್ಲಿ ಒಬ್ಬರಾದ ಕಿಚ್ಚ ಸುದೀಪ್ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ನಟಿಸಿರುವುದರಿಂದ ಬೇರೆ ಕನ್ನಡ ನಟರಿಗೆ ಹೋಲಿಸಿದರೆ ಮಾಕೆ೯ಟ್ ದೊಡ್ಡದಿದೆ. 
 
ಹೆಬ್ಬುಲಿ ಬಗ್ಗೆ ಹೇಳುತ್ತಾ, ದಿಢೀರನೆ ಅಮಿರ್, ಶಾರುಖ್ ಬಾಲಿವುಡ್ ವಿಷಯದ ಕಡೆ ಏಕೆ ತಿರುಗಿಸಲಾಗುತ್ತಿದೆ ಎನ್ನುವ ಪ್ರಶ್ನೆ ಬರಬಹುದು. 
 
ಇಂಟರ್‌ನೆಟ್ ನಲ್ಲಿ ಅತಿ ಹೆಚ್ಚು ಯಾವ ಸಿನಿಮಾದ ಬಗ್ಗೆ ಹುಡುಕಲಾಗಿದೆ ಎಂಬ ಐ. ಎಂ. ಡಿ. ಬಿ.  ಸಮೀಕ್ಷೆ ಪ್ರಕಾರ ಭಾರತೀಯ ಸಿನಿಮಾಗಳಲ್ಲಿ ಕನ್ನಡದ ಸುದೀಪ್ ರ ಹೆಬ್ಬುಲಿಯ ಸಿನಿಮಾ ಬಗ್ಗೆ ಮೂರನೇ  ಅತಿ ಹೆಚ್ಚು ಹುಡುಕಲ್ಪಟ್ಟಿರುವ  ಚಿತ್ರ ಎಂದು ತಿಳಿದು ಬಂದಿದೆ. ಮೊದಲ ಸ್ಥಾನದಲ್ಲಿ ಅಮೀರ್ ಖಾನ್ ರ ದಂಗಲ್ ಸಿನಿಮಾ ಇದ್ದು,  ಶೇ. 84% ಜನ ದಂಗಲ್ ಬಗ್ಗೆ ಮಾಹಿತಿ ಹುಡುಕಿದ್ದಾರೆ. ಎರಡನೇ ಸ್ಥಾನದಲ್ಲಿ ಶಾರುಖ್ ಖಾನ್ ರ ರೇಯಿಸ್ ಸಿನಿಮಾದ ಬಗ್ಗೆ   ಶೇ. 7% ಜನರಿಂದ ಮಾಹಿತಿ ಹುಡುಕಲ್ಪಟ್ಟಿದ್ದು ,  ಮೂರನೇ ಸ್ಥಾನದಲ್ಲಿ ಹೆಬ್ಬುಲಿ 2.7% ಜನರಿಂದ ಹುಡುಕಲ್ಪಟ್ಟಿದೆ.  
 
 
ಕನ್ನಡ ಚಿತ್ರರಂಗ ಈ ರೀತಿಯ ಬೆಳವಣಿಗೆ ಕಾಣುತ್ತಿರುವುದು ಹೆಮ್ಮೆಯ ವಿಚಾರ. ಒಂದು ಚಿತ್ರದ ಮೊದಲ ಆಹ್ವಾನ ಪತ್ರಿಕೆ, ಆ ಚಿತ್ರದ ಪೋಸ್ಟರ್. ಜನ ಮೊದಲು ಗಮನಿಸುವುದು ಆ ಚಿತ್ರದ ಪೋಸ್ಟರ್, ನಂತರ ಟ್ರೈಲರ್, ಹಾಡುಗಳು ಸಾಲಿನಲ್ಲಿ ನಿಲ್ಲುತ್ತವೆ. 
 
ಹೆಬ್ಬುಲಿಗೆ ಈ ರೀತಿಯ ಕ್ರೇಜ್  ಹುಟ್ಟಲು ಮೊದಲ ಕಾರಣ ಪೋಸ್ಟರ್.  ಸುದೀಪ್ ಗನ್ ಹಿಡಿದುಕೊಂಡು,  ಯುಧ್ದಕ್ಕೆ ಸಿಧ್ದನಾಗುವ ರೀತಿಯಲ್ಲಿ,  ವಿಭಿನ್ನ ಹೇರ್ ಸ್ಟೈಲ್ ಮತ್ತು ಆ್ಯಂಗ್ರಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪೋಸ್ಟರ್ ಅಂತರಾಷ್ಟ್ರೀಯ ಚಿತ್ರಗಳ ಮಟ್ಟದಲ್ಲಿದ್ದು, ತುಂಬಾ ಶ್ರೀಮಂತವಾಗಿದೆ. ಸುದೀಪ್ ಮೊದಲ ಬಾರಿಗೆ ಸೈನ್ಯಾಧಿಕಾರಿ ಆಗಿ ಕಾಣಿಸಿಕೊಳ್ಳತ್ತಿರುವುದು ಇನ್ನೊಂದು ಕುತೂಹಲಕ್ಕೆ ಕಾರಣವಾಗಿದೆ  
 
ಹೆಬ್ಬುಲಿಯ ಆಡಿಯೋ ಡಿಸೆಂಬರ್ 25 ರಂದು ದಾವಣಗೆರೆಯಲ್ಲಿ ಬಿಡುಗಡೆ ಆಗಿದ್ದು , ಎಲ್ಲಾ ಹಾಡುಗಳು ಇಷ್ಟವಾಗುವಂತೆ ಇವೆ. ಹಾಡುಗಳಿಂದ ಸಿನಿಮಾ ಇನ್ನಷ್ಟು ಕ್ರೇಜ್ ಹುಟ್ಟಲಿದೆ. ಹೆಬ್ಬುಲಿ ಚಿತ್ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. 
 
Author : Naveen Karthru 
Kiccha sudeep starring Kannada movie Hebbuli is now in the list of the most anticipated Indian movies in IMDB. [The Internet Movie Database]. Hebbuli stands in the third position after Amir Khan's Dhangal and Sharukh Khan's Raees. Kiccha sudeep starrer, Krishna directorial Hebbuli shooting is completed. Kannada movie hebbuli songs were released recently in Davangere and songs have become a huge hit. Kannada movie Hebbuli will hit screens very soon! 
 
Thanks for reading this article from proud kannadiga 
 

2017 ರ ಕನ್ನಡದ ಬಹು ನಿರೀಕ್ಷಿತ ಚಿತ್ರಗಳು – KANNADA MOST EXPECTED MOVIES 2017 

VOTE FOR BEST KANNADA DIRECTOR – 2016 – VOTE MAADI 

Leave a Reply

Your email address will not be published. Required fields are marked *