Karnataka Flag world record

ಇತಿಹಾಸ ನಿರ್ಮಾಣ ಮಾಡಿದ ಕನ್ನಡದ ಬಾವುಟ

loading...

ರಾಯಚೂರಿ ನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ, ಯಶಸ್ವಿಯಾಗಿ ಮುಗಿದಿದೆ. ಸಾವಿರಾರು ಕಲಾವಿದರು,  ಕವಿಗಳು,  ಸಾಹಿತಿಗಳು ಮತ್ತು ಲಕ್ಷಾಂತರ ಜನರು ಸಮ್ಮೇಳನ ದಲ್ಲಿ ಭಾಗವಹಿಸಿದ್ದರು. 

ಜಿಲ್ಲೆಯ ಕೃಷಿ ವಿವಿ ಆವರಣದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆಯನ್ನು ಬರಗೂರು ರಾಮಚಂದ್ರಪ್ಪ ವಹಿಸಿಕೊಂಡಿದ್ದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವ ತನ್ವಿರ್ ಸೇಠ್, ಜಿಲ್ಲೆಯ ಕ. ಸಾ. ಪ ಅಧ್ಯಕ್ಷ  ಬಸವಪ್ರಭು ಪಾಟೀಲ್ ಮತ್ತು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗರ್ ಕನ್ನಡ ಬಾವುಟ ,  ಪರಿಷತ್ ಬಾವುಟ ಹಾರಿಸಿ ಚಾಲನೆ ನೀಡಿದರು.

ಇಡಿ ರಾಯಚೂರು ವಿವಿಧ ಬಣ್ಣ,  ಹಸಿರು ತೋರಣ ಗಳಿಂದ ಸಿಂಗರಿಸಲ್ಪಟ್ಟಿತ್ತು.  ಸಾಹಿತ್ಯ ಪ್ರೇಮಿಗಳು,  ಕಲಾ ಪ್ರೇಮಿಗಳು ಎಲ್ಲಾ ಸಂಭ್ರಮ ಸಡಗರ ದಿಂದ ಓಡಾಡುತ್ತಿದ್ದರು. ಸಾಹಿತ್ಯ ಸಮ್ಮೇಳನ ಕೇವಲ ಸಾಹಿತ್ಯ ಸಮ್ಮೇಳನ ವಾಗಿರದೇ ಈ ನಾಡಿನ ಕಲೆ, ಸಂಸ್ಕೃತಿ,  ಜಾನಪದ ಕಲೆಗಳ ಪರಿಮಳ ವನ್ನು ಸಾರುತಿತ್ತು.  ರಾಯಚೂರಿನ ರಸ್ತೆಗಳಲ್ಲಿ ಕನ್ನಡ ಭಾಷಾ, ಸಾಹಿತ್ಯ ಪ್ರೇಮಿಗಳು ಘೋಷಣೆ ಕೂಗುವುದು ಕಂಡು ಬಂದಿತು.
30ಕ್ಕೂ ಅಧಿಕ ಜಾನಪದ, ಸಾಂಸ್ಕೃತಿಕ ತಂಡಗಳು ಭಾಗವಹಿಸಿ ಹಲವಾರು ಸಾಂಸ್ಕೃತಿಕ ಮನರಂಜನೆ ನೀಡಿದವು .  ಸಮ್ಮೇಳನ ದಲ್ಲಿ ಕೆಲವು ಪುಸ್ತಕಗಳು ಬಿಡುಗಡೆ ಗೊಂಡು , ಹಲವು ಪುಸ್ತಕಗಳು ಪ್ರದಶ೯ನ ಗೊಂಡವು. 

Karnataka flag World Record

ಈ ಬಾರಿ ಸಮ್ಮೇಳನ ದಲ್ಲಿ ಹೆಚ್ಚು ವಿಶೇಷ ವಾಗಿ ಕಂಡದ್ದು ತಾರನಾಥ್ ಶಿಕ್ಷಣ ಸಂಸ್ಥೆಯ ವಿಧ್ಯಾಥಿ೯ ಗಳಿಂದ ತಯಾರಿಸಲ್ಪಟ್ಟ 3500 ಅಡಿ ಉದ್ದದ ಕನ್ನಡ ಬಾವುಟ ಎಲ್ಲರ ಗಮನ ಸೆಳೆಯಿತು.
ಈ ಬಾವುಟ ವಿಶ್ವದ ಅತಿ ಉದ್ದನೆಯ ಬಾವುಟ ಎನ್ನುವ ಹಿರಿಮೆಗೆ ಪಾತ್ರವಾಗಿದ್ದು ವಿಶ್ವ ದಾಖಲೆ ನಿಮಿ೯ಸಿದೆ. ಹಲವಾರು ವಿಧ್ಯಾಥಿ೯ಗಳು, ಕನ್ನಡ ಅಭಿಮಾನಿಗಳು ಬಾವುಟ ಹಿಡಿದು ರಾಯಚೂರಿನ ರಸ್ತೆಗಳಲ್ಲಿ ಜಾಥಾ ನಡೆಸಿದ್ದು ಸಮ್ಮೇಳನದ ಮೆರಗನ್ನು ಹೆಚ್ಚಿಸಿತ್ತು. 

Raichur Kannada event

ಒಂದು ಭಾಷೆ ಕೇವಲ ಮನುಷ್ಯ ಮನುಷ್ಯನ ನಡುವೆ ಭಾವನೆ ಗಳನ್ನು ಹಂಚಿಕೊಳ್ಳಲು ಮಾತ್ರ ಇರದೆ,  ಅದು ಸಾಹಿತ್ಯದ ಮೂಲಕ ಮನುಷ್ಯನ ಜೀವನದ ನೋವು, ನಲಿವಿನ ಭಾಗವಾಗಿದೆ.
ಮನುಷ್ಯ ದಿನ ನಿತ್ಯದ ಜೀವನದ ಜಂಜಾಟದಲ್ಲಿ ಸ್ವಲ್ಪ ಉಲ್ಲಾಸ,  ಉತ್ಸಾಹ ದಿಂದ ಇದ್ದಾರೆ ಅಂದ್ರೆ ಅದರಲ್ಲಿ ಸಾಹಿತಿಗಳು, ಕವಿಗಳ ಕೊಡುಗೆ ಅಪಾರ. 

Kannada Flag Amazing Record

ಕನ್ನಡ ಸಾಹಿತ್ಯದ ಓದುಗಾರರು ಇನ್ನೂ ಹೆಚ್ಚಾಗಿ,  ಬರಹಗಾರರು  ಸಾಹಿತ್ಯ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡಿ ಕನ್ನಡ ಸಾಹಿತ್ಯವನ್ನು  ಬೆಳೆಸಲಿ ಎಂದು ಹಾರೈಸೋಣ. 

Trending In Kannada

Article By : Naveen Karthru

ಇದನ್ನು ಓದಿದ್ದಕ್ಕೆ ಧನ್ಯವಾದಗಳು.. ಈ ಕೆಳಗಿನ ವೀಡಿಯೋ ಗಳನ್ನು ಮಿಸ್ ಮಾಡ್ಬೇಡಿ! Proud Kannadiga  

ಕನ್ನಡಿಗರಿಗೆ ಖಾಸಗಿ ಕ್ಷೇತ್ರದಲ್ಲೂ ಮೇಲುಗೈ ಸಾಧಿಸಲು ಮೀಸಲು – ತಪ್ಪದೇ ಶೇರ್ ಮಾಡಿ 

“ಓಂ” ಚಿತ್ರದ ಬಗ್ಗೆ ನಿಮಗೆ ಗೊತ್ತಿರದ ಅದ್ಭುತ ವಿಷಯಗಳು 

loading...

One Comment

Leave a Reply

Your email address will not be published. Required fields are marked *