Kannadiga Karun Nair Indian Cricket

ಕನ್ನಡಿಗ ಕರುಣ್ ನಾಯರ್ ರಿಂದ ಟೆಸ್ಟ್ ನಲ್ಲಿ ರೋಚಕ ತ್ರಿಶತಕ

Indian cricket player Karun Nair is trending all over the internet! The reason for this viral Kannada news is that Kannadiga Karun Nair has scored a triple century in India Vs England Test match. Congrats to this amazing player Karun Nayer and the whole Indian cricket team. Thank you Karun Nair for making Kannadigas proud. 
Stay tuned for more amazing articles from proudkannadiga    
 
ಕನ್ನಡಿಗರಾದ ಕರುಣ್ ನಾಯರ್ ರ ರೋಚಕ ತ್ರಿಶತಕ ಮತ್ತು ಮತ್ತೊಬ್ಬ ಕನ್ನಡಿಗ ರಾಹುಲ್  ಶತಕದ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಬೃಹತ್  ಮೊತ್ತ ಕಲೆ ಹಾಕಿದೆ. 
 
ಅದು ಯುಧ್ದ ಭೂಮಿಯೋ ಅಥವಾ ಕ್ರಿಡಾಂಗಣವೋ ಯೋಚಿಸುತ್ತಿರಲಿಲ್ಲ, ಅಲ್ಲಿಂದ ಹೊರಗೆ ಬರುವ ಯಾವುದೇ ಸುಳಿವು ನೀಡದೇ, ತಮ್ಮ ಬ್ಯಾಟ್ ನಿಂದ  ಸರಾಗವಾಗಿ ರನ್ ಹರಿಸುತ್ತಿದ್ದರು. ಮಧ್ಯಾಹ್ನದ ಸೂಯ೯ ನೆತ್ತಿಯ ಮೇಲೆ ಸುಡುತ್ತಿದ್ದರು, ಅಪರಿಮಿತ ಸಹನಶಕ್ತಿಯಿಂದ,  ಕ್ರಿಡಾಂಗಣದ ಮೂಲೆ ಮೂಲೆಗೂ ನೆಟ್ಟ ಕಣ್ಣು ಬಿಡದೆ ಇಂಗ್ಲಿಷ್ ಬೌಲರ್ ಗಳ ಬೆವರಿಳಿಸಿದ ಕರುಣ್ ನಾಯರ್.  ವೀರೆಂದ್ರ ಸೆಹ್ವಾಗ್ ನಂತರ ತ್ರಿಶತಕ ಗಳಿಸಿದ ಭಾರತದ ಕೇವಲ ಎರಡನೇ ಬ್ಯಾಟ್ಸ್ ಮೆನ್ ಎನಿಸಿದರು. 
 
 ಇಂಗ್ಲೆಂಡ್ ಬೌಲರ್ಸ್ ಮತ್ತು ಫೀಲ್ಡರ್ಸ್ ದಿನ    ಪೂತಿ೯ ಹೋರಾಡಿದರು ಕರುಣ್ ವಿಕೆಟ್ ಬೀಳದೇ ಇದ್ದದ್ದು,  ಮರುಭೂಮಿಯಲ್ಲಿ ನೀರು ಸಿಗದೆ ಹೋರಾಡಿ ಸುಸ್ತಾದಂತೆ ಕಾಣುತ್ತಿದ್ದರು.  ಕರುಣ್  ತ್ರಿಶತಕ ಗಳಿಸಿದಾಗ ಭಾರತದ ನಾಯಕ ವಿರಾಟ್ ಕೊಹ್ಲಿ ಡಿಕ್ಲೆರ್ ಘೋಷಿಸಿದರು.  ಭಾರತದ ಒಟ್ಟು ಸ್ಕೋರ್ ಮೊದಲ ಇನ್ನಿಂಗ್ಸ್ ನಲ್ಲಿ 759/7 ಗಳಿಸಿದ್ದು 270 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ.  ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 477 ಮತ್ತು ಎರಡನೇ ಇನ್ನಿಂಗ್ಸ್ 4ನೇ ದಿನದ ಅಂತ್ಯಕ್ಕೆ  12/0 ಗಳಿಸಿದೆ.  
 
 
 
ಟೆಸ್ಟ್ ನ ಎರಡನೇ ದಿನ ಮತ್ತೊಬ್ಬ ಕನಾ೯ಟಕದ ಆಟಗಾರ ಕೆ. ಎಲ್. ರಾಹುಲ್ ಜೊತೆಗೂಡಿದ್ದ ಕರುಣ್ ನಾಯರ್.  ಇಬ್ಬರು ಆಟಗಾರರು ಇಂಗ್ಲೆಂಡ್ ಬೌಲರ್ ಗಳ ಮೇಲೆ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ನಿಂದ ಬೆವರಿಳಿಸಿದರು. ರಾಹುಲ್ ಕೇವಲ 1 ರನ್ನಿಂದ ಚೊಚ್ಚಲ ದ್ವಿಶತಕದಿಂದ ವಂಚಿತರಾದರು. 
303 ರನ್ ಕರುಣ್ ನಾಯರ್ ಹೆಚ್ಚು ರನ್ ಅಲ್ಲ. ಕೊನೆಯ ವಷ೯ ಇದೆ ರಾಹುಲ್ ಜೊತೆಗೂಡಿ ರಣಜಿ ಟ್ರೋಫಿಯಲ್ಲಿ  328 ರನ್ ಗಳಿಸಿದ್ದರು. ಆದರೆ ಇದು ಟೆಸ್ಟ್ ಪಂದ್ಯ ಆದ್ದರಿಂದ ಬೌಲಿಂಗ್ ದಾಳಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇರುತ್ತದೆ. 
 
ಭಾರತದ ಮುಂದಿನ ಟೆಸ್ಟ್ ಸರಣಿ ಬಾಂಗ್ಲಾದೇಶದ ವಿರುದ್ಧ ಇದ್ದು,  ಆಯ್ಕೆ ಸಮೀತಿ ಭಾರತದ ಬ್ಯಾಟಿಂಗ್ ಕ್ರಮಾಂಕವನ್ನು  ಹೇಗೆ ವ್ಯವಸ್ಥೆಗೊಳಿಸುತ್ತದೆ ಎಂಬ ಕುತೂಹಲ ಇದೆ.  ಏಕೆಂದರೆ ಬಾಂಗ್ಲಾದೇಶದ ಸರಣಿಗೂ ಮುನ್ನ ರೋಹಿತ್ ಶಮ೯ ಮತ್ತು ಅಜಿಂಕ್ಯಾ ರಹಾನೆ ಸಮಥ೯ರಾಗುವ ಸಾಧ್ಯತೆ ಇದ್ದು,  ತ್ರಿಶತಕ ಬಾರಿಸಿದ ಕರುಣ್ ನಾಯರ್ ರನ್ನು ಕೈ ಬಿಡುವುದು ಆಯ್ಕೆ ಸಮೀತಿಗೆ ಕಷ್ಟ ಸಾಧ್ಯ. 
 
ನಾಯರ್ ತ್ರಿಶತಕದ ಹಾದಿಯಲ್ಲಿ, ಹಲವು ಅದೃಷ್ಟಗಳು ನಾಯರ್ ರ ಕೈ ಹಿಡಿದಿದ್ದವು. 
ಭಾನುವಾರ ನಾಯರ್ 34 ರನ್ ಗಳಿಸಿದ್ದಾಗ ಜೇಕ್ ರವರ ಬೌಲಿಂಗ್ ನಲ್ಲಿ  ಕುಕ್ ಗೆ ಕ್ಯಾಚ್ ನೀಡಿದ್ದರು.  ಆದರೆ ಕೈಗೆ ಬಂದ ಕ್ಯಾಚನ್ನು ಕುಕ್ ಕೈ ಚೆಲ್ಲಿದ್ದರು. 
ಸೋಮವಾರ ನಾಯರ್ 217 ರನ್ ಗಳಿಸಿದ್ದಾಗ,  ತನ್ನ ಟೆಸ್ಟ್ ಜೀವನದ 2ನೇ ವಿಕೆಟ್ ಕಬಳಿಸುವ ಉತ್ಸಾಹದಿಂದ ಬೌಲಿಂಗ್ ಮಾಡಿದ್ದ ಜೇಕ್ ರ ಚೆಂಡು ನಾಯರ್ ರ ಬ್ಯಾಟ್ ಗೆ ತಗುಲಿ,  ಸ್ಲಿಪ್ ನಲ್ಲಿ ಇದ್ದ ಜೊ ರೂಟ್ ಕಡೆ ಹೋದರು,  ಅದೃಷ್ಟ ನಾಯರ್ ಕಡೆ ಇದ್ದರಿಂದ ಜೋ ರೂಟ್ ಕ್ಯಾಚ್ ಕೈ ಚೆಲ್ಲಿದ್ದರು. 
 
ನಾಯರ್ 246 ರನ್ ಗಳಿಸಿದ್ದಾಗ ವಿಕೆಟ್ ಕೀಪರ್  ಮೋಹಿನ್ ಅಲಿಯಿಂದ ಸ್ಟಂಪ್ ಆಗುವ ಸಾಧ್ಯತೆ ಇತ್ತು.  ಮತ್ತೆ 3ನೇ ಬಾರಿ ನಾಯರ್ ಉಳಿದರು. 
 
5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈಗಾಗಲೇ 3-0 ಅಂತರದಿಂದ ಸರಣಿ ವಶಪಡಿಸಿಕೊಂಡಿರುವ ಭಾರತ ಮಂಗಳವಾರ ಇನ್ನೊಂದು ಟೆಸ್ಟ್ ಗೆಲ್ಲುವ ಉತ್ಸಾಹದಲ್ಲಿದೆ. 
Author : Naveen Karthru 
 
 
 

ಮಫ್ತಿ ಹವಾ ಶುರು! – MUFTI KANNADA MOVIE TEASER 

VOTE FOR BEST KANNADA ACTOR – 2016 – ವೋಟ್ ಮಾಡಿ 

Leave a Reply

Your email address will not be published. Required fields are marked *