Kirik party kannada movie

ಕಿರಿಕ್ ಪಾಟಿ೯ ಎದುರು ಡಲ್ ಆದ ದಂಗಲ್ – Kirik Party Kannada Beats Dhangal!

ನೋಟ್ ಬ್ಯಾನ್ ನ ಕೊನೆಯ ದಿನ, ಪ್ರೇಕ್ಷಕರಿಗೆ  ಹೊಸ  ವಷ೯ದ ಕೊಡುಗೆಯಾಗಿ ಬಿಡುಗಡೆಯಾದ ಕಿರಿಕ್ ಪಾಟಿ೯ ಕಿರಿಕ್ ಎಲ್ಲ ಕಡೆ ಜೋರಾಗಿದೆ. 
ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ  ಹೆಚ್ಚಾಗಿ ಹೌಸ್ ಫುಲ್ ಪ್ರದಶ೯ನ ಕಾಣುತ್ತಿರುವ ಕಿರಿಕ್ ಪಾಟಿ೯ ಭಜ೯ರಿ ಬಾಕ್ಸ್ ಆಫಿಸ್ ಕಲೆಕ್ಷನ್ಸ್  ಮಾಡುತ್ತಿದೆ. 
 
ಕನ್ನಡ ಚಿತ್ರಗಳು ಎಂದರೆ ಮುಖ ತಿರುವುತ್ತಿದ್ದ ಮಲ್ಟಿಪ್ಲೆಕ್ಸ್ ಗಳು ಈಗ ಕಿರಿಕ್ ಪಾಟಿ೯ ಹಿಂದೆ ಬಿದ್ದಿವೆ. ಬಿಡುಗಡೆಯಾದ  ನಾಲ್ಕು ದಿನಕ್ಕೆ ಮಲ್ಟಿಪ್ಲೆಕ್ಸ್ ಗಳಲ್ಲಿ ಶೋ ಗಳ ಸಂಖ್ಯೆಯನ್ನು ಹೆಚ್ಚಿಸಿವೆ. 
 
ಯುನಿವಷ೯ಲ್ ಸ್ಟಾರ್ ಅಮೀರ್ ಖಾನ್ ನಟಿಸಿರುವ ದಂಗಲ್ ಚಿತ್ರವು ಬಿಡುಗಡೆಯಾದ ದಿನದಿಂದಲೂ ವಿಶ್ವದಾದ್ಯಂತ ಅಲ್ಲದೆ, ಕನಾ೯ಟಕದಲ್ಲೂ ಭಜ೯ರಿ ಹೌಸ್ ಫುಲ್ ಪ್ರದಶ೯ನ ಕಾಣುತಿತ್ತು, ಆದರೆ ಕನ್ನಡದ ಕಿರಿಕ್ ಪಾಟಿ೯  ಬಿಡುಗಡೆಯಾದ ನಂತರ ಕನಾ೯ಟಕದಲ್ಲಿ ಕಲೆಕ್ಷನ್ಸ್ ಡಲ್ ಆಗಿದೆ. 
 
ವಾರಂತ್ಯವಲ್ಲದೇ ವಾರದ ದಿನಗಳಲ್ಲಿಯೂ ಕಿರಿಕ್ ಪಾಟಿ೯ಯ ಟಿಕೆಟ್ ಗಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ ಜನರು ಪರದಾಡುತ್ತಿದ್ದಾರೆ. ದಂಗಲ್ ಚಿತ್ರಕ್ಕಿಂತ ಹೆಚ್ಚಿನ ಆನ್ ಲೈನ್  ಟಿಕೆಟ್  ಬುಕಿಂಗ್ ಕಿರಿಕ್ ಪಾಟಿ೯ಗೆ  ಆಗುತ್ತಿದೆ. ಈ ರೀತಿಯ ಒಂದು ಬೆಳವಣಿಗೆ ಕನ್ನಡ ಚಿತ್ರರಂಗಕ್ಕೆ ಪ್ರೋಟಿನ್ ದೊರೆತ ಹಾಗೆ ಆಗಿದೆ. 
 
ವಿತರಕರು ಹೇಳುವ ಪ್ರಕಾರ ಚಿತ್ರ ಬಿಡುಗಡೆಯಾದ ಒಂದು ವಾರದಲ್ಲಿ  ಹಾಕಿರುವ ಬಂಡವಾಳ ವಾಪಸ್ ಬಂದಿದ್ದು, ಮುಂದೆ ಬರುವ ಕಲೆಕ್ಷನ್ ಎಲ್ಲವೂ ಲಾಭ ಎನ್ನುತ್ತಿದ್ದಾರೆ. ಒರಾಯನ್ ಮಾಲ್ ನ ಪಿ. ವಿ. ಆರ್  ಒಂದರಿಂದಲೇ ಒಂದು ವಾರದಲ್ಲಿ 50 ಲಕ್ಷ ಕಲೆಕ್ಷನ್ ಆಗಿದ್ದು, ಚಿತ್ರದ ತಾಪಮಾನ ಹೇಗಿದೆ ಎಂದು ತಿಳಿಯುತ್ತದೆ. 
 
ಬೆಂಗಳೂರಿನ ಅನುಪಮ, ಗೋವಧ೯ನ್, ಕಾಮಾಕ್ಯ, ಚಿತ್ರಮಂದಿರಗಳು, ಮೈಸೂರು, ಹುಬ್ಬಳ್ಳಿಯ ಎಲ್ಲ ಮಲ್ಟಿಪ್ಲೆಕ್ಸ್ ಗಳಲ್ಲಿ ಮೊದಲ ವಾರದ ಎಲ್ಲ ಶೋ ಗಳು ಹೌಸ್ ಫುಲ್ ಆಗಿದ್ದವು ಎಂದು ನಿಮಾ೯ಪಕರು ಹೇಳುತ್ತಾರೆ. 
 
ರಕ್ಷಿತ್ ಶೆಟ್ಟಿಗೆ 2016 ಡಬಲ್ ಧಮಾಕ ಎಂದೆ ಹೇಳಬಹುದು. ವಷ೯ದ ಮಧ್ಯ ಭಾಗದಲ್ಲಿ ಬಿಡುಗಡೆಯಾದ ಗೋಧಿ ಬಣ್ಣ ಸಾಧಾರಣ ಮೈಕಟ್ಟು  ಕ್ಲಾಸ್ ಆಡಿಯನ್ಸ್ ನ ಮೆಚ್ಚುಗೆಗೆ ಪಾತ್ರವಾಗಿತ್ತು. ಚಿತ್ರ ಪಿ. ವಿ. ಆರ್ ನಲ್ಲಿ  100 ದಿನ ಪ್ರದಶ೯ನ ಕಂಡಿತ್ತು. 
 
ಈಗ 2016 ವಷ೯ದ ಕೊನೆಯ ಮತ್ತು 2017 ರ ಪ್ರಾರಂಭಕ್ಕೆ ಕಿರಿಕ್ ಪಾಟಿ೯  ಕೊಡುಗೆಯಾಗಿದೆ.  ಕಿರಿಕ್ ಪಾಟಿ೯ ಗೆಲ್ಲಲು ಕಾರಣ, ಚಿತ್ರ ನಮ್ಮನ್ನು ಕಾಲೇಜು ದಿನಗಳ ಸಿಹಿ ನೆನಪಿಗೆ ಕೊಂಡುಯ್ಯುವಂತೆ ಮಾಡುವುದು. ಪ್ರತಿಯೊಂದು ದೃಶ್ಯವನ್ನು ಜನರ ಮನಸ್ಸಿಗೆ, ಭಾವನೆಗಳಿಗೆ  ಹತ್ತಿರವಾಗುವಂತೆ ಕಟ್ಟಿಕೊಟ್ಟಿರುವುದು  ಚಿತ್ರವನ್ನು ಜನ  ಮುಗಿ ಬಿದ್ದು ನೋಡುವಂತೆ ಮಾಡಿದೆ. 
 
ಚಿತ್ರ ಬಿಡುಗಡೆಗೂ ಮುನ್ನ ಹಾಡು ಮತ್ತು ಟ್ರೈಲರ್ ಗಳಿಂದ ಸುದ್ದಿ ಮಾಡಿತ್ತು. ಬಿಡುಗಡೆ ಆಗುವ 3-4 ದಿನಗಳಲ್ಲಿ  ಲಹರಿ ಸಂಸ್ಥೆ, ಕಿರಿಕ್ ಪಾಟಿ೯ ಯಲ್ಲಿ 1989 ರ ಶಾಂತಿ ಕ್ರಾಂತಿಯ ಹಾಡಿನ ಟ್ಯೂನ್ ಉಪಯೋಗಿಸಿಕೊಂಡಿದ್ದಕ್ಕೆ , ಕೋಟ್೯ ನಲ್ಲಿ ತಕರಾರು ಅಜಿ೯ ಹಾಕಿ ಚಿತ್ರ ಬಿಡುಗಡೆಗೆ ತಡೆ ಹಾಕಿದ್ದು  ಚಿತ್ರಕ್ಕೆ ಸ್ವಲ್ಪ ಹಿನ್ನಡೆಯಾಗಿತ್ತು.  ಆದರೆ ಕಿರಿಕ್ ಪಾಟಿ೯ ಚಿತ್ರತಂಡ ಮತ್ತೆ  ಹೈ ಕೋಟ್೯ ನಲ್ಲಿ ಚಿತ್ರ ಬಿಡುಗಡೆಗೆ ಅನುಮತಿ  ಕೋರಿದ್ದರಿಂದ  ಚಿತ್ರ ನಿರತಂಕವಾಗಿ ಬಿಡುಗಡೆಯಾಗಿತ್ತು. 
 
ಆದರೆ ಚಿತ್ರದ ಆಡಿಯೋ ಬಿಡುಗಡೆಯಾಗಿ ಒಂದು ತಿಂಗಳಾದರೂ ಸುಮ್ಮನೇ ಇದ್ದ ಲಹರಿ ಸಂಸ್ಥೆ, ಬಿಡುಗಡೆಯ ಸಂದಭ೯ದಲ್ಲಿ ಕಿರಿಕ್ ಮಾಡಿದ್ದು ಚಿತ್ರತಂಡದ ಬೇಸರಕ್ಕೆ ಕಾರಣವಾಗಿತ್ತು.  ಈಗ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿರುವುದು ಕಿರಿಕ್ ದಿನಗಳನ್ನು ಮರೆಸಿದೆ. 
Author : Naveen Karthru 
Thanks for reading this article from proudkannadiga.com . Kirik party kannada movie running successfully all over Karnataka. Kirik party is directed by Rishab Shetty and starring Rakshith shetty. 

ಇಡೀ ಭಾರತ ಮೆಚ್ಚಿದ ಕನ್ನಡದ ನಿರ್ದೇಶಕರು 

ಅನು ಶ್ರೀ ಮೇಲೆ ಚಿಕ್ಕಣನಿಗೆ ಲವ್!!! 

Leave a Reply

Your email address will not be published. Required fields are marked *