Narendra Modi Note ban kannada song

ಮೋದಿ ನೋಟ್ ಬ್ಯಾನ್ ವೈರಲ್ ಸಾಂಗ್ – Modi Note Ban Viral Kannada Song

ನವೆಂಬರ್ 8 ನೋಟ್ ಬ್ಯಾನ್ ಆದ ದಿನ, ಇಡಿ ದೇಶದ ಜನ ಒಂದು ಕ್ಷಣ ಶಾಕ್ ಆಗಿದ್ದರು.  ಕೆಲವರಿಗಂತೂ ಮೋಡನೆ ತಲೆ ಮೇಲೆ ಬಿದ್ದ ಭಾವನೆ ಉಂಟಾಗಿತ್ತು.  ಇರೋ ಕೆಲಸನೇ ಯಾರ್ ಮಾಡ್ತರಪ್ಪ ಅಂತ ಸೋಮಾರಿ ಯೋಚನೆಯಿಂದ ಕಷ್ಟ ಪಟ್ಟು ದುಡಿತ ಇದ್ದ ಜನರಿಗೆ, ಇದೊಂದು ತಲೆ ನೋವು ಬಂತು ಅಂತ ತಲೆ ಕೆರೆದುಕೊಳ್ಳತೊಡಗಿದ್ದರು. 
 
ಆದರೂ ದಿನ ನಿತ್ಯ ಬ್ಯಾಂಕ್ ಗೆ,  ಎ. ಟಿ. ಎಂ.  ಮುಂದೆ ಕ್ಯೂ ನಿಂತು ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದರು.  ಆದರೆ ಕೇಂದ್ರ ಸಕಾ೯ರ  ಎರಡು ತಿಂಗಳಲ್ಲಿ ದಿನಕ್ಕೊಂದು ರೂಲ್ಸ್ ಮಾಡಿ ಸಾಮಾನ್ಯ ಜನರನ್ನು ಗೊಂದಲ ಉಂಟು ಮಾಡಿತ್ತು.  ಈವಾಗ ಎಲ್ಲವೂ ತಣ್ಣಾಗಾಗಿದ್ದರು ಕೆಲವರಿಗೆ ಹಿಂದಿನ ತಿಂಗಳ ಸಂಬಳ ಸಿಗದೆ ಪರದಾಡುತ್ತಿದ್ದಾರೆ.  
 
 
 
ಇನ್ನೂ ನೋಟ್  ಬ್ಯಾನ್ ಪರಿಣಾಮವಾಗಿ ಸಣ್ಣ ಪುಟ್ಟ ಕಾಳಧನಿಕರಿಗೆ ದೊಡ್ಡ ಮಟ್ಟದ ಪರಿಣಾಮ ಆಗಿದ್ದು ಸುಳ್ಳಲ್ಲ. ಆದರೆ ದೊಡ್ಡ ದೊಡ್ಡ ತಿಮಿಂಗಿಲಗಳು ಆಗಲೇ ಅಡ್ಜಸ್ಟ್ ಮಾಡಿಕೊಂಡಿದ್ದವು. ಕಪ್ಪು ಹಣದ ಆಳ ಸಮುದ್ರದ ಹಾಗೆ, ಅಲ್ಲಿ ಚಿಕ್ಕ ಪುಟ್ಟ ಮೀನು ದೊರೆತ ತಕ್ಷಣ, ಇಡಿ ಸಮುದ್ರದ ಮೀನು ಸಿಕ್ಕಿದವು ಎನ್ನುವುದು ಮೂಖ೯ತನ.  ಆದರೂ ದೇಶದಲ್ಲಿ  ಸಣ್ಣ ಒಂದು ಕಪ್ಪು ಹಣ  ತೊಲಗುವ ಬದಲಾವಣೆ ಗಾಳಿ ಬೀಸಿದ್ದು ಸುಳ್ಳಲ್ಲ. 
 
ಈ ಸಣ್ಣ ಗಾಳಿಯನ್ನೆ ಬಿರುಗಾಳಿ ಬಂತು ಎನ್ನುವ ಮಟ್ಟಕ್ಕೆ,  ಉತ್ತರ ಕನಾ೯ಟಕ ಭಾಗದ ಒಂದು ಟೀಮ್,  ಮೋದಿಯ  ಕೆಲಸವನ್ನು ಹಾಡಿನ ಮೂಲಕ  ಹೊಗಳಿದ್ದಾರೆ. ನೋಟ್  ಬ್ಯಾನ್ ನಿಂದ ಆದ ಧನಾತ್ಮಕ ಪರಿಣಾಮವನ್ನು ಸಾರುವುದರ ಜೊತೆಗೆ ಜನರಿಗೆ ಒಂದು ಕಿವಿ ಮಾತನ್ನು  ಹೇಳಿದ್ದಾರೆ. 
 
ಈ ಹಾಡನ್ನು  ನವೆಂಬರ್ 30 ರಂದು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದ್ದು, ಇಲ್ಲಿಯವರೆಗೆ ಸುಮಾರು 4.5 ಲಕ್ಷ ಜನ ವೀಕ್ಷಿಸಿದ್ದಾರೆ. ಹಾಡಿನಲ್ಲಿ  ಇನ್ನೊಂದು ಗಮನ ಸೆಳೆಯುವ ಅಂಶವೆಂದರೆ ಗಂಗ್ನಂ  ಖ್ಯಾತಿಯ ಡ್ಯಾನ್ಸನ್ನು  ಇಲ್ಲಿ ಬಳಸಿಕೊಂಡಿರುವುದು. ಹಾಡಿಗೂ ಮತ್ತು ನೃತ್ಯಕ್ಕೂ  ಚೆನ್ನಾಗಿ ಹೊಂದಿಸಲಾಗಿದೆ. ಮೋದಿಯ ಅಭಿಮಾನಿಯಾಗಿದ್ದಾರೆ ನೀವು ಈ ಹಾಡು ನೋಡಿ ಖುಷಿಪಡಬಹುದು. 
Author : Naveen Karthru 
A team from North Karnataka has come up with this amazing song on Narendra Modi Ban in India. Checkout and enjoy this amazing viral Modi note ban song. Do share this with your friends. Thanks for reading this article from proudkannadiga.com  
 

LATE OM PURI’S FIRST MOVIE WAS IN KANNADA 

PUSHPAKA VIMANA KANNADA REVIEW 

Leave a Reply

Your email address will not be published. Required fields are marked *