Om puri kannada movie bollywood actor

ಓಂ ಪುರಿಯವರ ಮೊದಲ ಚಿತ್ರ ಕನ್ನಡದ್ದು!! – Late Om Puri’s First Movie Was In Kannada

Late Bollywood legendary actor Om Puri's first cinema was  a novel based Kannada Movie and later has acted in the blockbuster movie Ak47 starring Dr. Shivrajkumar /Shivanna. Checkout this story of indian cinema actor Om Puri. 
 
ಬಾಲಿವುಡ್ ನ ಖ್ಯಾತ ನಟ ಓಂ ಪುರಿಯವರ ಪೂಣ೯ ಹೆಸರು ಓಂ ಪ್ರಕಾಶ್ ಪುರಿ. ಪಂಜಾಬ್ ನಲ್ಲಿ ಹುಟ್ಟಿದ್ದ ಪುರಿ, ಮರಾಠಿ ರಂಗಭೂಮಿಯಲ್ಲಿ  ತೊಡಗಿಸಿಕೊಂಡವರು.  1972  ರಿಂದ 1975 ರ ತನಕ 'ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ'ದಲ್ಲಿ  ನಟನಾ ತರಬೇತಿ  ಪಡೆದುಕೊಂಡಿದ್ದರು. ಬಾಲಿವುಡ್ ನಟ ನಾಸಿರುದ್ದಿನ್ ಶಾ ಕೂಡ ಇವರು ಸಹಪಾಠಿಯಾಗಿದ್ದರು. 
 
ಮೂರು ವಷ೯ಗಳ ಕಾಲ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಓಂ ಪುರಿ, ಚಿತ್ರರಂಗಕ್ಕೆ  ಪಾದಾಪ೯ಣೆ ಮಾಡಿದ್ದು 1976 ರಲ್ಲಿ ಮರಾಠಿ ಚಿತ್ರ ಫಶಿರಂ ಕೊತ್ವಾಲ್ ಮೂಲಕ. ಆದರೆ ಅವರ ಬಿಡುಗಡೆಯಾದ ಮೊಟ್ಟ ಮೊದಲ ಚಿತ್ರ ಕನ್ನಡದ ತಬ್ಬಲಿಯೂ ನಿನಾದೆ ಮಗನೇ. ಇದೆ ಚಿತ್ರ ಹಿಂದಿಯಲ್ಲಿ  ಗೋಧೂಳಿ ಎಂಬ ಹೆಸರಿನೊಂದಿಗೆ  ರಿಮೇಕ್ ಆಗಿತ್ತು,  ಇದರಲ್ಲೂ ಓಂ ಪುರಿ ನಟಿಸಿದ್ದರು.  
 
 
ತಬ್ಬಲಿಯು ನಿನಾದೆ ಮಗನೇ ಚಿತ್ರವು 1977 ರಲ್ಲಿ ತೆರೆಕಂಡಿತ್ತು.  ಚಿತ್ರದ ಮುಖ್ಯಭೂಮಿಕೆಯಲ್ಲಿ ನಾಸಿರುದ್ದಿನ್ ಶಾ,  ಟಿ. ಎಸ್.ನಾಗಾಭರಣ, ಓಂ ಪುರಿ  ಮತ್ತು ಕೃಷ್ಣಮೂತಿ೯ ನಟಿಸಿದ್ದರು. ಇನ್ನೊಂದು ಸಂಗತಿಯೆಂದರೆ ಬಾಲಿವುಡ್ ನ ಖ್ಯಾತ ನಟ ನಾಸಿರುದ್ದಿನ್ ಶಾರ ಮೊದಲ ಚಿತ್ರವು ಇದಾಗಿತ್ತು. 
 
ತಬ್ಬಲಿಯು ನಿನಾದೆ ಮಗನೇ ಚಿತ್ರವು  ಎಸ್. ಎಲ್. ಭೈರಪ್ಪ ರವರ ಕಾದಂಬರಿ ಆಧಾರಿತ ಚಿತ್ರವಾಗಿದ್ದು,   ಗಿರೀಶ್ ಕಾನಾ೯ಡ್  ಮತ್ತು ಬಿ.ವಿ. ಕಾರಂತರು ಚಿತ್ರವನ್ನು ನಿದೇ೯ಶನ ಮಾಡಿದ್ದರು.  ಈ ಚಿತ್ರವೂ  1977 ರಲ್ಲಿ  ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿತ್ತು. 
 
1977 ರ ನಂತರ ಹಿಂದಿ, ಇಂಗ್ಲೀಷ್ ಸಿನಿಮಾಗಳಲ್ಲಿ ಬಿಝಿ಼ಯಾದ ಓಂ ಪುರಿ, ಮತ್ತೆ ಕನ್ನಡದಲ್ಲಿ ನಟಿಸಿದ್ದು  ಸುಮಾರು 22 ವಷ೯ಗಳ ಬಳಿಕ ಶಿವರಾಜ್ ಕುಮಾರ್ ರ  A.K.47 ಚಿತ್ರದಲ್ಲಿ. A.K.47 ಚಿತ್ರದಲ್ಲಿ ಪೋಲಿಸ್ ಆಫಿಸರ್ ಆಗಿ ಕಾಣಿಸಿಕೊಂಡಿದ್ದ ಅವರು, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದರು. 
A. K. 47 ಚಿತ್ರ 1999 ರ ಸೂಪರ್ ಹಿಟ್ ಆಗಿತ್ತು.  ಚಿತ್ರಕ್ಕೆ ಓಂ ಪ್ರಕಾಶ್ ರಾವ್ ನಿದೇ೯ಶನವಿತ್ತು. 
 
A. K.47  ಚಿತ್ರದ ನಂತರ 2002 ರಲ್ಲಿ ಬಂದ ದಶ೯ನ್ ನಟಿಸಿದ್ದ  ದೃವ ಚಿತ್ರದಲ್ಲೂ ಪೋಲಿಸ್ ಆಫಿಸರ್ ಆಗಿ ಕಾಣಿಸಿಕೊಂಡಿದ್ದರು. ಅದಾದ ನಂತರ ಓಂ ಕನ್ನಡದ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. 
 
ಒಳ್ಳೆಯ ನಟರಾಗಿದ್ದ ಓಂ ಪುರಿ ತಮ್ಮ ಉತ್ತಮ ನಟನೆಗೆ,  ಹಿಂದಿಯ ಆಕ್ರೋಶ್ ಮತ್ತು ಅಧ೯ ಸತ್ಯ  ಚಿತ್ರಗಳ ನಟನೆಗಾಗಿ ಕ್ರಮವಾಗಿ 1981 ಮತ್ತು 1983 ರಲ್ಲಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದರು. 
1990 ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮ ಶ್ರೀ ಗೆ ಭಾಜನರಾಗಿದ್ದರು. 
 
ಸಾಯುವ ದಿನಗಳಲ್ಲಿ ಸ್ವಲ್ಪ ಕಿನ್ನರಾಗಿದ್ದ ಓಂ ಪುರಿಯವರು ಡಿಸೆಂಬರ್ ತಿಂಗಳಲ್ಲಿ ಈ ರೀತಿಯ ಟ್ವೀಟ್ ಮಾಡಿದ್ದರು. ' ನನಗೆ ಜೀವನದಲ್ಲಿ ಯಾವುದೇ ಪಶ್ಚತ್ತಾಪ ಉಳಿದಿಲ್ಲ, ಮಾಡಬೇಕು ಅನಿಸಿದ್ದೆಲ್ಲ ಮಾಡಿದ್ದೇನೆ. ನಾನು ಅಹ೯ ಮುಖ ಹೊಂದಿಲ್ಲದಿದ್ದರೂ, ನನ್ನ ಕೆಲಸ ನನಗೆ ತೃಪ್ತಿ ಕೊಟ್ಟಿದೆ,  ಅದರ ಬಗ್ಗೆ ನನಗೆ ಹೆಮ್ಮೆ ಇದೆ'  ಎಂದು ಟ್ವೀಟ್ ಮಾಡಿದ್ದರು. 
Author : Naveen Karthru 
 
Thanks for reading this amazing article from proudkannadiga  
 

KICCHA SUDEEP – PRIYA SUDEEP – REUNITE! 

PUSHPAKA VIMANA KANNADA REVIEW 

Leave a Reply

Your email address will not be published. Required fields are marked *