Ramesh Aravind Pushpaka Vimana Review

ರಮೇಶ್ ಅರವಿಂದ್ 100ನೇ ಚಿತ್ರ ಸೂಪರ್! – Pushpaka Vimana Kannada Review

ಮುಗ್ದ ಅಪ್ಪ..!!  ಅವನಿಗೆ ಮಗಳೆ ಪ್ರಪಂಚ.  ಮಗಳಿಗೆ ತಂದೆಯೆ ಗೆಳೆಯ, ದೇವರು ಎಲ್ಲವೂ ಆಗಿರುತ್ತಾನೆ.  ಇಬ್ಬರು ತಮ್ಮದೇ ಮುಗ್ದ ಪ್ರಪಂಚದಲ್ಲಿ ಇರುತ್ತಾರೆ.  ಇಬ್ಬರಿಗೂ ವಿಮಾನದಲ್ಲಿ ಹೋಗ ಬೇಕೆನ್ನುವ ಆಸೆ, ಅದು ಹಾರುವುದನ್ನು ನೋಡಿ ಸಂತೋಷದಿಂದ ಇರುತ್ತಾರೆ. ಆ ಖುಷಿಯ ನಡುವೆ ಸುನಾಮಿಯಂತೆ ಆಪತ್ತು ಬಂದು ಎರಗುತ್ತದೆ.  ತಾನು ಮಾಡದ ತಪ್ಪಿಗೆ ಕಾನೂನು ಎಂಬ ಕೂಪದಲ್ಲಿ ಸಿಕ್ಕಿಕೊಂಡು ಕಂಬಿಯ ಹಿಂದೆ ನಿಲ್ಲುತ್ತಾನೆ. ಆ ಕೂಪದಿಂದ ಪಾಪದ ಅಪ್ಪ ಮುಕ್ತನಾಗಿ, ತನ್ನ ಜಗತ್ತು ಎಂದುಕೊಂಡ ಮಗಳನ್ನು ಸೇರಬೇಕು. ಕಡೆಗೆ ಸೇರುತ್ತಾನ??  
 
ತಂದೆ ಮಗಳ ಭಾಂದವ್ಯ,  ಮುಗ್ದ ಪ್ರೀತಿ ಸಮಾಜದ ಮತ್ತು  ಕಾನೂನಿನ ಕ್ರೌಯ೯ದ ನಡುವೆ ಸಿಕ್ಕಿ ಒದ್ದಾಡುವುದು,  ನಿಮ್ಮ ಕಣ್ಣಂಚಲ್ಲಿ ಒದ್ದೆ ಆಗುವಂತೆ ಮಾಡುತ್ತದೆ. ಗಾಢವಾದ ಸಂಬಂಧದ ಬಗ್ಗೆ ಚಿತ್ರದಲ್ಲಿ ಇದೆ,  ಈ ಕಾರಣದಿಂದ ಚಿತ್ರವನ್ನು ಮಿಸ್ ಮಾಡಿಕೊಳ್ಳುವ ಕಾರಣಗಳು ಇಲ್ಲ. 
 
ಪುಷ್ಪಕ ವಿಮಾನ ಕೊರಿಯಾ ಚಿತ್ರವಾದ 'ಮಿರಾಕಲ್ ಇನ್ ಸೆಲ್ ನಂಬರ್ 7' ಚಿತ್ರದ ನಕಲು.  ಕೆಲವು ಅಂಶಗಳನ್ನು ಹೊರತು ಪಡಿಸಿದರೆ ಶೇ. 95% ಮೂಲ ಚಿತ್ರದ್ದೆ ಅಗಿದೆ.  ಯಾರೇ ಆ ಚಿತ್ರವನ್ನು ನೋಡಿದರೂ ನಮ್ಮ ಭಾಷೆಗೆ ತರಬೇಕು ಎನ್ನುವ ಭಾವನೆ ಹುಟ್ಟುತ್ತದೆ.  ಆದರೆ ಕಥೆ ಎಲ್ಲಿಯದು ಎಂದು ಕೇಳುವುದಕ್ಕಿಂತ, ಅಲ್ಲಿರುವ ಭಾವನೆಗಳು,  ಸಂಬಂಧಗಳ ಸೂಕ್ಷ್ಮತೆಗಳು ಹೃದಯಕ್ಕೆ ಹತ್ತಿರವಾದ್ದರಿಂದ ಕೇಳಬಾರದು. 
 
ಸುಭಾಸ್ ಚಂದ್ರರನ್ನು ನೆನಪಿಸುವ ಅಪ್ಪನ ಡ್ರೆಸ್, ವಿಮಾನದ ಆಟಿಕೆ ಕೊಳ್ಳುವ ಮಗಳ ಬಯಕೆ, ಕಾನೂನಿಗಿಂತ ಭಾವನೆಗಳು ಎಂದು , ಸತ್ಯಕ್ಕೆ ಸಹಕರಿಸುವ,  ಹೃದಯ ಮಿಡಿಯುವ  ಕಟ್ಟುನಿಟ್ಟು ಜೈಲರ್.  ಭಾವನೆಗಳೆ ಇಲ್ಲದಂತೆ ಕಾಣುವ,  ಮುಗ್ದತೆಯ ಪ್ರೀತಿಗೆ  ಸೋತು ಅವರಲ್ಲೂ ಭಾವನೆಗಳು ಇವೆ ಎಂದು ತೋರುವ ಖೈದಿಗಳು -  ಮುಗ್ದತೆಯಿಂದ ಶತ್ರುಗಳು ಗೆಳೆಯರಾಗುತ್ತಾರೆ ಎಂಬ ನೇಣು ಹಗ್ಗದ  ನೇರಳಿನ ಹಿಂದಿರುಗವ ಸಾಲುಗಳು - ನಮ್ಮನ್ನು ಹಿಡಿದಿಡುತ್ತವೆ. 
ಈ ಚಿತ್ರದ ಕಥೆ, ಚಿತ್ರಕಥೆಯ ಪ್ರಶಂಸೆ  ಮೂಲ ಚಿತ್ರದ ನಿದೇ೯ಶಕ ಲೀ ಹಾನ್ ಕ್ಯೂಂಗ್ ಗೆ  ಸಲ್ಲಬೇಕು. 
 
ವಿಮಾನ ರಮೇಶ್ ಅರವಿಂದ್ ರ 100ನೇ ಚಿತ್ರವಾಗಿದ್ದು , ಪಾತ್ರವನ್ನು ಆವಾರಿಸಿದ್ದಾರೆ. ಮೂಲ ಚಿತ್ರಕ್ಕೆ ಹೋಲಿಕೆ ಮಾಡದೆ ಇದ್ದರೆ ರಮೇಶ್ ರ ನಟನೆ ಇಷ್ಟವಾಗಬಹುದು. ಮಗಳ ಪಾತ್ರದ ಬೇಬಿ ಯುವಿಕಾ ನಟನೆ ನೈಜವಾಗಿದ್ದು,  ಅವರ ಮುಗ್ದತೆ ನಗಿಸುತ್ತಾ, ಅಳಿಸುತ್ತದೆ. 
 
ಚಿತ್ರದ ಯಾವುದೇ ಲಾಜಿಕ್,  ನೇಟಿವಿಟಿಯ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಚಿತ್ರವನ್ನು ನೋಡಿ ಹೃದಯ ತುಂಬಿಕೊಳ್ಳಬಹುದು. ಉಗ್ರಂ ಖ್ಯಾತಿಯ ಭುವನ್ ಗೌಡ ಛಾಯಾಗ್ರಹಣವಿದ್ದು,  ಅಧ್ಬುತವಾದ ಫ್ರೇಮ್, ಲೈಟಿಂಗ್ ನಿಂದ ಚಿತ್ರವನ್ನು ಒಂದು ಸುಂದರ ಕಲಾಕೃತಿಯಂತೆ ಕೆತ್ತಿದ್ದಾರೆ. ಇವರಿಗೆ ಪೈಪೋಟಿಯಂತೆ ಚರಣ್ ರಾಜ್ ರ ಹಿನ್ನೆಲೆ ಸಂಗೀತ ಚಿತ್ರವನ್ನು  ಮನ ಮುಟ್ಟುವಂತೆ ಮಾಡುತ್ತದೆ. 
 
ಚಿತ್ರ ನಮ್ಮನ್ನು ಮುಗ್ದತೆಯ ಆಚೆ,  ಸಂಬಂಧಗಳ ಒಳಗೆ ತಂದು ಕೂರಿಸುತ್ತದೆ. ಇಂತಹ ಅಪರೂಪದ ಚಿತ್ರಗಳನ್ನು ಮರೆಯದೆ ನೋಡಬೇಕು. 
Author : Naveen Karthru 
 
Exclusive review of Kannada movie Pushpaka Vimana. Pushpaka Vimana is 100th movie of kannada ace actor and director namma Ramesh Aravind. Pushpaka Vimana is a must watch movie and is getting amazing response all over karnataka. Do not miss to watch this amazing movie! Thanks for reading this kannada movie review from proudkannadiga.com  
 

KANNADA MOVIE SHRIKANTA REVIEW 

ಈ ಬಾರಿಯ ಬಿಗ್ ಬಾಸ್ ನ ವಿನ್ನರ್ ಯಾರು? – BIGG BOSS KANNADA WINNER ? 

Leave a Reply

Your email address will not be published. Required fields are marked *