Kannadigas reservation in Private IT Companies

ಕನ್ನಡಿಗರಿಗೆ ಖಾಸಗಿ ಕ್ಷೇತ್ರದಲ್ಲೂ ಮೇಲುಗೈ ಸಾಧಿಸಲು ಮೀಸಲು – ತಪ್ಪದೇ ಶೇರ್ ಮಾಡಿ

ರಾಜ್ಯ ಸರ್ಕಾರ ಸಂತಸದ  ಸುದ್ದಿಒಂದನ್ನ ಮುಂಬರುವ ಬಜೆಟ್ ಅಧಿವೇಶನದಲ್ಲಿ ಕನ್ನಡಿಗರಿಗೆ  ಹಂಚಲಿದ್ದಾರೆ. ಬಹುದಿನದ ಬೇಡಿಕೆಯೊಂದನ್ನು ಈಡೇರಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಖಾಸಗಿ  ಕ್ಷೇತ್ರದಲ್ಲಿಯೂ ಕನ್ನಡದವರಿಗೆ ಮೇಲುಗೈ ಸಾಧಿಸಲು ಇದೊಂದು ಸದಾವಕಾಶ. ತಾಂತ್ರಿಕ ಕಾರಣಗಳಿಂದ ಬೆಳಗಾವಿ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗಲಿಲ್ಲ, ಆ ಕಾರಣದಿಂದ ಮುಂಬರುವ ಬಜೆಟ್ ಅಧಿವೇಶನದಲ್ಲಿ ತೀರ್ಮಾನಗೊಳ್ಳಲಿದೆ. 
 
೧೯೮೬ನಲ್ಲಿ ಸರೋಜಿನಿ ಮಹಿಷಿರವರ ಕನ್ನಡಿಗರ ಮೀಸಲಾತಿಯೆಂಬ ವರಿದಿಯು ಈ ತೀರ್ಮಾನದ ಮೂಲ.ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿಯೂಸಹ ರಿಯಾಯಿತಿ ನೀಡಲಾಗುವುದು ಎಂದು ಹಿರಯ ಅಧಿಕಾರಿಗಳು ವಿವರಿಸಿದ್ದಾರೆ.
 
ಉನ್ನತ ಹುದ್ದೆಗಳಲ್ಲಿ ಕಡಿಮೆ ಪ್ರಮಾಣದ ಮೀಸಲು ನಿಗದಿಪಡಿಸುವ ಉದ್ದೇಶ ಹೊಂದಲಾಗಿದ್ದು, ಐಟಿಬಿಟಿ ವಲಯದ ಸಿ ಹಾಗು ಡಿ ದರ್ಜೆ ನೌಕರಿ ಕಡ್ಡಾಯವಾಗಿ ಕನ್ನಡದವರಿಗೆ ಮೀಸಲಿರುವುದು. ಈ ಕಾಯ್ದೆ ಜಾರಿಗೆ ಬಂದೊಡನೆ ಅಡಚಣೆಯಾಗಬಹುದೆಂಬ ಕಾರಣಕ್ಕಾಗಿ ಮಂಡನೆ ಮುಂದೂಡಲಾಗಿದೆ.
 
"ಕನ್ನಡಿಗರಿಗೆ ರಾಜ್ಯದಲ್ಲಿ ಉದ್ಯೋಗ ಮೀಸಲು ಸಿಗಬೇಕೆಂಬ ಬೇಡಿಕೆ ಬಹುದಿನಗಳಿಂದ ಇತ್ತು . ಅದನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇವೆ . ಖಾಸಗಿ  ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೀಸಲು ತರುವ ಹೊಸ ಕಾನೂನು ತರಲಾಗುತ್ತದೆ. ಬಜೆಟ್ ಅಧಿವೇಶನದಲ್ಲಿಯೇ ಹೊಸ ವಿಧೇಯಕ ಮಂಡನೆಯಾಗಲಿದೆ"ಎಂದು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ವ್ಯಕ್ತಪಡಿಸಿದ್ದಾರೆ 
 
ಕರ್ನಾಟಕದಲ್ಲೇ ಕನ್ನಡಿಗರಿಗೆ ಪರಬಾಷಿಕರಿಂದ ಆನ್ಯಾಯವಾಗುತ್ತಿದೆ ಎಂಬ ಕೊರಗು ೧೯೮೩ರ ರಾಮಕೃಷ್ಣ ಹೆಗಡೆರವರ ಸರ್ಕಾರದಿಂದಲೇ ಶುರುವಾಗಿತ್ತು.
 
ಕನ್ನಡಿಗರಿಗೆ ರೈಲ್ವೆ ಹಾಗು ಸಾರ್ವಜನಿಕ ಕ್ಷೇತ್ರದಲ್ಲಿ ಉದ್ಯೋಗ  ಮೀಸಲು ನೀಡುವ ಬಗ್ಗೆ ಸರೋಜಿನಿರವರು ಸಲ್ಲಿಸಿದ ವರದಿಯನ್ನು ಸರೋಜಿನಿ ಮಹಿಷಿ ವರದಿ ಎಂದೇ ಪ್ರಸಿದ್ಧವಾಗಿದೆ . ಈ ವರದಿ ಅನುಷ್ಠಾನಕ್ಕೆ ಬರಲಿರುವುದು ಕನ್ನಡಿಗರಿಗೆ ಸಂತಸ ತಂದಿದೆ.  
 
Great news for all the Kanndigas. Government is planning to implement reservation for Kannadigas in the Private IT Sector of Karnataka. Thanks to Government of Karnataka for this amazing move. 
 
Thanks for reading this article! Stay tuned for more updates from http://proudkannadiga.com/ 
Author : AKSHAY BHARADWAJ M   
 
Paper Article about this amazing news 🙂 
Kannadigas reservation in software
 
 
ಈ ಅದ್ಭುತ ವೀಡಿಯೋ ಗಳನ್ನು ನೋಡಿರಿ:  
 

CHALLENGING STAR DARSHAN ಅವರ FARMHOUSE ಆಲ್ಲಿ ಒಂದು ರೌಂಡ್! 

Leave a Reply

Your email address will not be published. Required fields are marked *