Sachin Baby marriage video

ಆರ್. ಸಿ. ಬಿ. ಆಟಗಾರ ಬೇಬಿ, ಅನ್ನಾಗೆ ಮೈದಾನದಲ್ಲೇ ಬೋಲ್ಡ್ – ವೈರಲ್ ವಿಡಿಯೋ

ಪ್ರತಿಯೊಬ್ಬರಿಗೂ ತಮ್ಮ ಮದುವೆ ವಿಭಿನ್ನವಾಗಿ ನಡೆಯಬೇಕೆಂಬ ಕನಸುಗಳು,  ಆಸೆಗಳು ಇರುತ್ತವೆ. 
ಹಣ ಇರುವವರು ತಮ್ಮ ಆಸೆಗಳನ್ನು ಸುಲಭವಾಗಿ ಈಡೇರಿಸಿಕೊಂಡರೆ, ಹಣ ಇಲ್ಲದವರು ತಮ್ಮ ಅಂತಸ್ತಿಗೆ ತಕ್ಕಂತೆ ಮದುವೆ ಆಗುತ್ತಾರೆ. 
 
ಇತ್ತಿಚೇಗಷ್ಟೆ ಕೋಟಿ ಕುಳ ಗಾಲಿ ಜನಾಧ೯ನ ರೆಡ್ಡಿಯ ಮಗಳ ಮದುವೆ ಅಧ್ದೂರಿಯಾಗಿ ನಡೆದಿತ್ತು. ರೆಡ್ಡಿ ತನ್ನ ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ವಿಭಿನ್ನವಾಗಿ ಮಾಡಿದ್ದರು. ಆ ಆಮಂತ್ರಣ ಪತ್ರಿಕೆಯನ್ನು ತೆರೆದರೆ ಒಂದು ಎಲ್. ಸಿ. ಡಿ. ಸ್ಕ್ರೀನ್, ಅಲ್ಲಿ ' ಬ್ರಾಹ್ಮಿಣಿ ವೆಡ್ಸ್ ರಾಜೀವ್ ರೆಡ್ಡಿ'  ಪ್ರಾರಂಭವಾಗಿ, ರೆಡ್ಡಿ ಕುಟುಂಬ ಡ್ಯಾನ್ಸ್ ಮಾಡಿ ಮದುವೆಗೆ ಆಮಂತ್ರಿಸುವ ವಿಡಿಯೋ ಇತ್ತು. 
 
 

ಈಗ ಹೀಗೆ ವಿಭಿನ್ನವಾದ ಆಮಂತ್ರಣವನ್ನು ಆರ್. ಸಿ. ಬಿ. ತಂಡದ ಆಟಗಾರ  ಸಚಿನ್ ಬೇಬಿ ನೀಡಿದ್ದಾರೆ. ಬೇಬಿ ತನ್ನ ಪ್ರೇಯಸಿ ಅನ್ನಾ ಚಾಂಡಿಗೆ ಪ್ರೇಮ ನಿವೇದನೆ ಮಾಡುತ್ತಿರುವ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ.  ಒಂದು ದಿನದಲ್ಲಿ 1.5 ಲಕ್ಷ ಜನ ವೀಕ್ಷಿಸಿದ್ದಾರೆ.  
 
ವಿಡಿಯೋ ದಲ್ಲಿ ಬೇಬಿ ಮತ್ತು ಆನ್ನಾ ಚಾಂಡಿ ಆರ್. ಸಿ. ಬಿ. ಜೆಸಿ೯ ಹಾಕಿಕೊಂಡಿದ್ದಾರೆ. ಬ್ಯಾಟ್ ನೊಂದಿಗೆ ಮೈದಾನಕ್ಕೆ ಇಳಿಯುವ ಸಚಿನ್ ಬೇಬಿಗೆ ಅನ್ನಾ  ಬೌಲಿಂಗ್ ಮಾಡುತ್ತಾರೆ. ನಂತರ ಬೇಬಿ ಅನ್ನಾ ಬಾಲ್ ಗೆ ಬೋಲ್ಡ್ ಆಗುತ್ತಾರೆ.  ಬೇಬಿ ಪ್ರೇಮ ನಿವೇದನೆ ಮಾಡಿದಾಗ, ಅನ್ನಾ ಹಣೆಯ ಮೇಲೆ ಮುತ್ತು ಕೊಟ್ಟು ಬೇಬಿಯ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ. 
 
ಸಚಿನ್ ಬೇಬಿ ಮತ್ತು ಆನ್ನಾ ಚಾಂಡಿ ಸುಮಾರು ಎರಡು ವಷ೯ಗಳಿಂದ ಡೇಟಿಂಗ್ ಮಾಡುತ್ತಿದ್ದು, ಈ ಜನವರಿ 5, 2017 ರಂದು ಕೇರಳದ ತೋಡುಪಾ೯ಜದ ಸೆಂಟ್. ಸೆಬಾಸ್ಟಿನ್ ಚಚ್೯ ನಲ್ಲಿ ಮದುವೆ ಬಂಧನಕ್ಕೆ ಒಳಗಾಗಲು ಸಜ್ಜಾಗಿದ್ದಾರೆ.
 
ಕೇರಳದ ಎಡಗೈ ಬ್ಯಾಟ್ಸ್ ಮೆನ್ ಆದ ಸಚಿನ್ ಬೇಬಿ, 2009 ರಲ್ಲಿ ಕೇರಳ ರಾಜ್ಯ ಕ್ರಿಕೆಟ್ ಗೆ ಪಾದಾಪ೯ಣೆ ಮಾಡಿದ್ದರು. ಮೊದಲು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಯ್ಕೆಯಾಗಿದ್ದ ಬೇಬಿ, 2016 ರಲ್ಲಿ ಆರ್. ಸಿ. ಬಿ ಗೆ ಆಯ್ಕೆ ಆಗಿದ್ದರು. ಆರ್. ಸಿ. ಬಿ. ಡ್ಯಾಸಿಂಗ್ ಬ್ಯಾಟ್ಸ್ ಮೆನ್ ಆಗಿ ಕನ್ನಡಿಗರ ಗಮನ ಸೆಳೆದಿದ್ದರು. 
ಅವರ ಮದುವೆ ಜೀವನ ಸುಖಕರ ವಾಗಿರಲಿ ಎಂದು ಹಾರೈಸೋಣ.  
 
Popular Cricketer and RCB player Sachin Baby wedding invite video has become viral and is trending across all the social media platforms. Sachin Baby's marriage invite video is shot in a cricket ground which is first of its kind. 
 

ಭಾರತದಲ್ಲಿ ಹೆಬ್ಬುಲಿಗೆ ಮೂರನೇ ಸ್ಥಾನ!!! 

ಪ್ರಧಾನಿ ಮೋದಿಯಿಂದ ಮೂಡಿಗೆರೆ ಹುಡುಗಿಯ ಪತ್ರಕ್ಕೆ ಸ್ಪಂದನೆ – NARENDRA MODI 

Leave a Reply

Your email address will not be published. Required fields are marked *