Shrikanta kannada movie review

Kannada Movie Shrikanta Review – Shivanna

ಅಧಿಕಾರದ ದುರಾಸೆ ಇದ್ದವನು, ತನ್ನ ಅಧಿಕಾರದ ಆಸೆಗಾಗಿ ತನ್ನ ಸುತ್ತಮುತ್ತ ಇರುವವರನ್ನು, ಸಾಮಾನ್ಯ ಜನರನ್ನು ಉಪಯೋಗಿಸಿಕೊಳ್ಳುತ್ತಾನೆ.  
ಅದನ್ನು ಅರಿಯುವ ಹೊತ್ತಿಗೆ ಪರಿಣಾಮ ಉಂಟಾಗಿರುತ್ತದೆ. 
 
ಅವನು ಅನಾಥ ತನ್ನ ಹೊಟ್ಟೆ ಪಾಡಿಗಾಗಿ ಯಾರೇ ಹಣ ಕೊಟ್ಟು ಕೆಲಸ ಮಾಡಲು ಹೇಳಿದರೆ,  ಕೊಲೆ, ದರೋಡೆ ಬಿಟ್ಟು ಬೇರೆ ಏನು ಬೇಕಾದರೂ ಮಾಡುತ್ತಾನೆ.  ಅವನ ಬಗ್ಗೆ ಏನು ತಿಳಿಯದ ಅವಳು ಅವನನ್ನು ಪ್ರೀತಿಸುತ್ತಾಳೆ.  ಒಂದು ದಿನದಲ್ಲಿ ತನ್ನ ಹಿಡಿ ಜೀವನದ ಬಡತನದ ಮಜಲನ್ನು,  ಒರಟುತನವನ್ನು ಅವನು ತೋರಿಸಿದರೂ ನಾಯಕಿಗೆ ಅವನನ್ನೆ ಮದುವೆ ಆಗುವ ಇಚ್ಚೆ.!! 
 
ನಂತರ ಅವನಿಂದ ಅನುಭವಿಸುವ ಕಷ್ಟ,  ಅವಳಿಂದ ಅವನು ಹೇಗೆ ಬದಲಾಗುತ್ತಾನೆ ಎಂಬುದು ಕಥೆಯ ಒಂದು ಭಾಗ. ಚಿತ್ರದಲ್ಲಿ   ಸಾಮಾನ್ಯ ಜನ ಮನಸ್ಸು ಮಾಡಿದರೆ ರಾಜಕಾರಣಿಗಳನ್ನ ಕುಚಿ೯ ಮೇಲೂ ಏರಿಸಬಹುದು,  ಇಳಿಸಲುಬಹುದು ಎಂಬ ಸಂದೇಶವಿದೆ. 
 
ಚಿತ್ರದಲ್ಲಿ ಹೇಳಲು ಹೊರಟಿರುವ ವಿಷಯ ಚೆನ್ನಾಗಿದೆ. ಆದರೆ ಚಿತ್ರದ ನಿರೂಪಣೆಯಲ್ಲಿ ನಿದೇ೯ಶಕರು ಸೋತಿದ್ದಾರೆ. ಕೊನೆಯ ಅಧ೯ ಗಂಟೆ ಸ್ವಲ್ಪ ಸೀಟಿನಲ್ಲಿ ಕೂರಿಸುತ್ತದೆ.  ದೃಶ್ಯಗಳು ಚೆನ್ನಾಗಿದ್ದರೂ, ನಿರೂಪಣೆ, ದೃಶ್ಯಗಳು ವೇಗವಾಗಿ ಸಾಗುವುದರಿಂದ ಪ್ರೇಕ್ಷಕರಿಗೆ ನಾಟುವುದಿಲ್ಲ.  ಕೆಲವು ಕಡೆ ಅನಾವಶ್ಯಕ ಲವ್ ದೃಶ್ಯಗಳು ಬೇಕಿರಲಿಲ್ಲ ಎನಿಸುತ್ತದೆ. 
 
ಚಿತ್ರದ ಇನ್ನೊಂದು ಮೈನಸ್ ಎಂದರೆ ಹಿನ್ನೆಲೆ ಸಂಗೀತ. ಹಲವು ಕಡೆ ಹಿನ್ನೆಲೆ ಸಂಗೀತ ಸಪ್ಪೆ ಆಗಿರುವುದು ದೃಶ್ಯಗಳು ಮನಸ್ಸಿಗೆ ಮುಟ್ಟಲು ವಿಫಲವಾಗಿದೆ. ಫೈಟ್ ದೃಶ್ಯಗಳಲ್ಲಿಯೂ ಕೂಡ ಹಿನ್ನೆಲೆ ಸಂಗೀತ ವಿಫಲವಾಗಿರುವುದು ಪರಿಣಾಮಕಾರಿ ಎನಿಸುವುದಿಲ್ಲ. 
 
ಟ್ರೈಲರ್ ನಲ್ಲಿ ಶಿವಣ್ಣ ಫೈಟ್ ನಲ್ಲಿ ವಿಷ್ಣುವಧ೯ನ್ ರ ನಾಗರಹಾವು ಹಿನ್ನೆಲೆ ಸಂಗೀತ ಉಪಯೋಗಿಸಿದ್ದು,  ಅಭಿಮಾನಿಗಳಲ್ಲಿ ಶಿವಣ್ಣರ ಬಗ್ಗೆ ಚಿತ್ರದ ಬಗ್ಗೆ ಕುತೂಹಲ ಮೂಡಿಸಿತ್ತು.  ಒಂದು ಫೈಟ್ ನಲ್ಲಿ ಹಾವಿನ ದ್ವೇಷ ಹಾಡನ್ನು ಉಪಯೋಗಿಸಿಕೊಂಡರೂ,  ಪ್ರೇಕ್ಷಕರು ಆ ಪೈಟ್ ಜೊತೆ ಹಿನ್ನೆಲೆ ಸಂಗೀತಕ್ಕಾಗಿ,  ಶಿವಣ್ಣರ ಸ್ಟೈಲ್ ಗಾಗಿ ಕಾಯುತ್ತಿದ್ದರೂ ನಿರಾಸೆ ಮೂಡಿಸುತ್ತದೆ. 
 
ನಿದೇ೯ಶಕ ಮಂಜು ಸ್ವರಾಜ್ ಆರಿಸಿಕೊಂಡಿರುವ ವಿಷಯ ಚೆನ್ನಾಗಿದೆ,  ಆದರೆ ಚಿತ್ರಕಥೆ ಯಲ್ಲಿ ಸ್ವಲ್ಪ ಎಡವಿದ್ದಾರೆ.  ತುಂಬಾ ವಿಷಯವನ್ನು ಹೇಳಲು ಹೊರಟಿರುವುದರಿಂದ ಕೆಲವನ್ನು ವೇಗವಾಗಿ ಹೇಳಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ದ ಹಾಡುಗಳು ಚೆನ್ನಾಗಿದ್ದು,  ಹಿನ್ನೆಲೆ ಸಂಗೀತದಲ್ಲಿ  ಕಳಪೆ ಆಗಿದ್ದಾರೆ. 
 
ಶಿವಣ್ಣರ ಅಭಿನಯ ಎಂದಿನಂತೆ ಗಮನ ಸೆಳೆಯುತ್ತದೆ. ನಾಯಕಿ ಮಲಯಾಳಿ ಚೆಲುವೆ ಚಾಂದಿನಿ ಶ್ರೀಧರನ್ ಅಭಿನಯ ಮುಗ್ದವಾಗಿದ್ದು ಇಷ್ಟವಾಗುತ್ತಾರೆ . ಸ್ಪಶ೯ ರೇಖಾ ಪಾತ್ರಕ್ಕೆ ಅಂತಹ ಮಹತ್ವವೇನು ಇಲ್ಲ. ವಿಜಯರಾಘವೇಂದ್ರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
 
Author : Naveen Karthru  
 
Exclusive review of Shiva Rajkumar and Chandini Sreedharan starring kannada movie Shrikanta. Shrikanta kannada movie running successfully all over Karnataka. Thanks for reading the review of kannada movie Shrikanta from proudkannadiga 

ಈ ಬಾರಿಯ ಬಿಗ್ ಬಾಸ್ ನ ವಿನ್ನರ್ ಯಾರು? – BIGG BOSS KANNADA WINNER ? 

2017 ರಲ್ಲಿ ಬರುವ ಎಲ್ಲಾ ರಜಗಳ ಬಗ್ಗೆ ಉಪಯುಕ್ತ ಮಾಹಿತಿ! 

Leave a Reply

Your email address will not be published. Required fields are marked *