Shivanna Shivrajkumar in Shrikanta Kannada Movie

ಶ್ರೀಕಂಠ Shivanna ಸಖತ್ ಡ್ಯಾನ್ಸ್ – Shrikanta Kannada Movie

ಕಾಲಿಟ್ಟರೆ ಯುಧ್ದಾನೆ, ಗೀಳಿಟ್ಟರೆ ಮದ್ದಾನೆ, ಕಣ್ ಬಿಟ್ಟರೆ ಬೂದಿನೇ,  ಶ್ರೀಕಂಠ ನೋಡು ಇವನೇ..!! 
 
ಸಧ್ಯ ಶ್ರೀ ಕಂಠನ ಘಜ೯ನೆ ಜೋರಾಗೆ ಇದೆ.  ಶ್ರೀ ಕಂಠನ ಹೊಗಳುವ,  ಶ್ರೀ ಕಂಠನ ಧೈಯ೯, ಸಾಹಸದ ಬಗ್ಗೆ ಸಾರುವ ಹಾಡು ಬಿಡುಗಡೆಯಾಗಿದೆ. ಪ್ರೋ. ಕೃಷ್ಣೆಗೌಡರು ಬರೆದಿರುವ ಈ ಹಾಡಿಗೆ ಹೇಮಂತ್, ಶಶಾಂಕ್, ಚೇತನ್ ಮತ್ತು ವಿಕಾಸ್ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ರ ಸಂಗೀತ ವಿದ್ದು,  ಶಿವಣ್ಣ ಹಾಡಿನಲ್ಲಿ ಎಂದಿನಂತೆ ಲವಲವಿಕೆಯಿಂದ ಕುಣಿದಿದ್ದಾರೆ.  
 
 
ತಮ್ಮ ಇಳಿ ವಯಸ್ಸಿನಲ್ಲೂ ಶಿವಣ್ಣ ಸಖತ್ ಸ್ಟೆಪ್ ಹಾಕಿದ್ದಾರೆ. ಸೆಪ್ಟಂಬರ್ ನಲ್ಲಿ ವಿಷ್ಣು ರವರ ಹುಟ್ಟು ಹಬ್ಬದ ಸಮಯದಲ್ಲಿ ಶ್ರೀ ಕಂಠ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. ಶಿವಣ್ಣ ವಿಷ್ಣುವಧ೯ನ್ ರ ತರಹ ಕೈಗೆ ಖಡ್ಗ ಹಾಕಿಕೊಂಡು,  ವಿಷ್ಣುವಧ೯ನ್ ರ ಸ್ಟೈಲ್ ಆದ ಖಡ್ಗ ಹಿಂದೆ ಮಾಡಿ ಯುಧ್ದಕ್ಕೆ ಸಿದ್ದರಾಗುವಂತೆ.  ಬ್ಯಾಕ್ ಗ್ರೌಂಡ್ ನಲ್ಲಿ ನಾಗರಹಾವು ಚಿತ್ರದ ಹಿನ್ನೇಲೆ ಸಂಗೀತ ಎಲ್ಲರ ಗಮನ ಸೆಳೆದಿತ್ತು. 
 
ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ಹಲವು ನಟರು ವಿಷ್ಣುವಧ೯ನ್ ರ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದರು.  ಆದರೆ ಇದೆ ಮೊದಲ ಬಾರಿಗೆ ಶಿವಣ್ಣ ವಿಷ್ಣುವಧ೯ನ್ ಅಭಿಮಾನಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಷ್ಣುವಧ೯ನ್ ಮತ್ತು ಶಿವಣ್ಣರ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. 
 
ಈ ಹಿಂದೆ ಶಿಶಿರದಂತಹ ಪ್ರಾಯೋಗಿಕ ಮತ್ತು ಶ್ರಾವಣಿ ಸುಬ್ರಮಣ್ಯ ದಂತಹ ಸೂಪರ್ ಹಿಟ್ ಕಾಮಿಡಿ ಸಿನಿಮಾ ನಿದೇ೯ಶನ ಮಾಡಿದಂತಹ ಮಂಜು ಸ್ವರಾಜ್ ಶ್ರೀ ಕಂಠ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿದೇ೯ಶನ ಮಾಡಿದ್ದಾರೆ. 
 
ಚಿತ್ರದ ಶೂಟಿಂಗ್ ಮುಗಿದಿದ್ದು, ಡಬ್ಬಿಂಗ್ ಕಾಯ೯ ಮುಗಿದಿದೆ.  ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಈ ತಿಂಗಳ ಅಂತ್ಯದೊಳಗೆ  ಮುಗಿಯಲಿದ್ದು.  ಚಿತ್ರ 2017 ಜನವರಿ ಹೊಸ ವಷ೯ದ ಕೊಡುಗೆಯಾಗಿ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ. ಅಲ್ಲಿವರೆಗೂ ಚಿತ್ರದ ಹಾಡುಗಳನ್ನು ಎಂಜಾಯ್ ಮಾಡಬಹುದು. 
 
Exclusive introduction song of the movie Shrikanta starring Shivanna / Shivrajkumar. Music for the kannada movie shrikanta is composed by Ajaneesh Lokanath. Shrikanta audio has become super hit and his releasing soon! 
 

Leave a Reply

Your email address will not be published. Required fields are marked *