Kirik Party Kannada Movie Rakshith Shetty and Upendra

Upendra – Uppi A ಕಿರಿಕ್ ಪಾಟಿ೯ – Kirik Party Kannada

ರಿಕ್ಕಿ ಸಿನಿಮಾದ ಯಶಸ್ಸಿನ ನಂತರ ಶೆಟ್ಟಿ ಫ್ರೆಂಡ್ಸ್  ರಿಷಬ್ ಶೆಟ್ಟಿ -  ರಕ್ಷಿತ್ ಶೆಟ್ಟಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಸಿನಿಮಾ ಸಧ್ಯ 'ಕಿರಿಕ್ ಪಾಟಿ೯'. 
 
ಕಿರಿಕ್ ಪಾಟಿ೯ ಸಿನಿಮಾದ ಶೂಟಿಂಗ್ ಈಗಾಗಲೇ ಮುಗಿದು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರವನ್ನು ರಕ್ಷಿತ್ ಶೆಟ್ಟಿ ನಿಮಿ೯ಸಿದ್ದು, ರಕ್ಷಿತ್ ಜೊತೆಗೂಡಿ ಗುಪ್ತಾ ಬಂಡವಾಳ ಹೂಡಿದ್ದಾರೆ. 
 
ಚಿತ್ರದ ಟ್ರೈಲರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, ಟ್ರೈಲರ್ ನ್ನು ಸೂಪರ್ ಸ್ಟಾರ್, ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ್ದರು. ಹಾಡುಗಳು ಮತ್ತು ಟ್ರೈಲರ್ ಈಗಾಗಲೇ  ಸಾಮಾಜಿಕ ಜಾಲತಾಣಗಳಲ್ಲಿ ಹವಾ ಕ್ರಿಯೇಟ್ ಮಾಡುತ್ತಿವೆ . ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು ' ಬೆಳಗಾಗೆದ್ದು ಯಾರ ಮುಖ ನೋಡಿದೆ'  ಮತ್ತು  ತಿಬೋ೯ಕಿ ಜೀವನ ಸಾಕಾಗಿದೆ  ಹಾಡುಗಳು  ಇಂಪಾಗಿದ್ದು 2 ಹಾಡುಗಳು ಹಿಟ್ ಲಿಸ್ಟ್ ಗೆ ಸೇರಿವೆ. "ಬೆಳಗಾಗೆದ್ದು  ಯಾರ ಮುಖ ನೋಡಿದೆ"  ಯೂಟ್ಯೂಬ್ ನಲ್ಲಿ ಈಗಾಗಲೇ 10 ಲಕ್ಷ ಜನ ವಿಕ್ಷೀಸಿದ್ದಾರೆ.  ಚಿತ್ರದ ಎಲ್ಲ ಹಾಡುಗಳಿಗೆ ರಕ್ಷಿತ್ ನೃತ್ಯ ಸಂಯೋಜಿಸಿದ್ದಾರೆ.  
 
ಚಿತ್ರದ ಹಾಡುಗಳು ಮತ್ತು ಟ್ರೈಲರ್ ನೋಡಿದರೆ ,  ಮನಸ್ಸನ್ನು  ಕಾಲೇಜು ದಿನಗಳ ಸಿಹಿ ನೆನಪುಗಳಿಗೆ ಕೊಂಡೊಯ್ಯುತ್ತದೆ. ' ಕಾಲೇಜು ದಿನಗಳಲ್ಲಿನ ತುಂಟತನ,  ಲವ್ ಸ್ಟೋರಿ, ಕೀಟಲೆಗಳು,  ಹೊಡೆದಾಟಗಳು ನೆನಪಾಗಿ ಕಾಡುತ್ತವೆ.  ಆ ದಿನಗಳನ್ನು ನೆನಪಿಸಿಕೊಂಡರೆ ಏನೋ ಕಳೆದುಕೊಂಡದನ್ನು ಮತ್ತೆ ಬಯಸುವಂತೆ ಅನಿಸುತ್ತದೆ. ಆ ದಿನಗಳನ್ನು ರಕ್ಷಿತ್ ಮತ್ತೆ  ಮರುಕಳಿಸುವ ಯತ್ನ ಮಾಡಿದ್ದಾರೆ. 
 
ಚಿತ್ರದ ಟ್ರೈಲರ್ ನಲ್ಲಿ ಬರುವ ಒಂದು ದೃಶ್ಯದಲ್ಲಿ,  ಉಪೇಂದ್ರರ 'ಎ'  ಸಿನಿಮಾದ ದೃಶ್ಯ  ಗಮನ ಸೆಳೆಯುತ್ತದೆ . 
ಬೇರೆ ಭಾಷೆಯ ವಿಧ್ಯಾಥಿ೯ಗಳು ಉಪೇಂದ್ರ ಸಿನಿಮಾದ ಪೋಸ್ಟರ್ ನೋಡಿ, ಯಾರೀದು ಎಂದು ಕೇಳಿದಾಗ.  ರಕ್ಷಿತ್ ಎಲ್ಲರನ್ನೂ ಒಂದು ಕೊಠಡಿಯಲ್ಲಿ ಕೂಡಿ ಹಾಕಿ 'ಎ'  ಸಿನಿಮಾ ತೋರಿಸುತ್ತಾರೆ. ರಕ್ಷಿತ್ ರವರ ಕಾಲೇಜು ಜೀವನದಲ್ಲಿ ನಡೆದ ನೈಜ ಘಟನೆಯು ಇದಾಗಿದೆ.  
 
Also watch the video of Upendra's A Kannada Movie in Rakshith Shetty's Kirik Party Movie 
 
ಉಪೇಂದ್ರ ರ 'ಎ'  ಸಿನಿಮಾ ಆ ದಿನಗಳಲ್ಲಿ  ಕನ್ನಡ ಸಿನಿಮಾ ರಂಗದಲ್ಲಿ  ಹೊಸ ಸುನಾಮಿ ಹುಟ್ಟು ಹಾಕಿದಂತಹ ಚಿತ್ರ. ಉಪೇಂದ್ರರಿಗೆ ಸಾಕಷ್ಟು ಅಭಿಮಾನಿ ಬಳಗವನ್ನು ಹುಟ್ಟು ಹಾಕಿದಲ್ಲದೆ, ಬಹಳ ಜನರಿಗೆ ಸಿನಿಮಾ ರಂಗಕ್ಕೆ ಬರಲು ಸ್ಫೂರ್ತಿ ಆಗಿತ್ತು. ರಿಷಬ್ ಶೆಟ್ಟಿ ಯವರಿಗೂ ಉಪೇಂದ್ರ ರವರು ಸ್ಫೂರ್ತಿ ಆಗಿದ್ದರು ಎಂದು ಹೇಳುತ್ತಾರೆ. 
 
ಕಿರಿಕ್ ಪಾಟಿ೯ ಯಲ್ಲಿ  ರಶ್ಮಿಕ ಮತ್ತು ಸಂಯುಕ್ತ ಹೆಗ್ಡೆ ಇಬ್ಬರು  ನಾಯಕಿಯರು. ಚಿತ್ರ ಜನವರಿಯಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ. ಕಿರಿಕ್ ಪಾಟಿ೯ಯ ಕಿರಿಕ್ ನೋಡಲು 2017 ತನಕ ಕಾಯಬೇಕು.  
Author : Naveen Karthru  
Thanks for reading this article from proudkannadiga  
Rakshith Shetty starring Rishab Shetty directorial Kirik Party is the most awaited Kannada Movie. As you all know that Rakshith shetty is one of the huge fan of real star of Kannada Upendra. His much awaited movie Kirik Party has scenes from Upendra's blockbuster kannada movie A directed and acted by namma real star Upendra. Rakshith Shetty has used the bits from A Kannada movie in a scene where entire boys hostel students will be watching this upendra starring super hit kannada movie. Kirik Party Kannada Movie will be hitting screens soon! 

ಸುಷ್ಮಾ ಸ್ವರಾಜ್ ರ ಕನ್ನಡ ಅಭಿಮಾನ 

DASA DARSHAN ಚಕ್ರವತಿ೯ DARBAR!! 

Leave a Reply

Your email address will not be published. Required fields are marked *