Kannada actor Yash helps Villains anil and uday family

ಅನಿಲ್ ಮತ್ತು ಉದಯ್ ಕುಟುಂಬಕ್ಕೆ ಯಶೋಮಾಗ೯

Kannada Rocking star Yash donated money to the families of Anil and Uday who recently died in a accident during movie shooting of Mastigudi directed by Nagshekar starring duniya vijay. 
ಸಾವ೯ತ್ರಿಕವಾಗಿ ಜನರು ಸಾವಿನ ಸಂತಾಪದಲ್ಲಿ ಆಳವಾಗಿ ಚಿಂತಿಸದೆ ತಮ್ಮ ಭಾವನೆಗಳನ್ನು ಏರಿಳಿತದಲ್ಲಿ ಪ್ರಕಟಿಸುತ್ತಾರೆ. ಒಬ್ಬನೇ ಮಗನಿದ್ದರೆ ಒಂದು ತರಹ 'ಪಾಪ ಒಬ್ಬನೇ ಮಗನಂತೆ ಎಂದು,  ಅದೇ 2-3 ಗಂಡು ಮಕ್ಕಳಿದ್ದರೆ ಬೇರೆ ತರಹ ಹೇಳುತ್ತಾರೆ. ಸತ್ತವರಿಗೆ ಮಕ್ಕಳಿದ್ದರೆ' ಪಾಪ ಮಕ್ಕಳಿದ್ದರಂತೆ ಎಂದು ಹೇಳುತ್ತಾರೆ.  ಅಂದರೆ ಇವರಿಗೆ ಜೀವ ಹೋಗಿರುವ ನೋವಿಗಿಂತ, ಅವರು ತಮ್ಮ ಜವಾಬ್ದಾರಿಯನ್ನು ಇನ್ನೋಬ್ಬರಿಗೆ ವಹಿಸಿ ಹೋದದ್ದು ಹೆಚ್ಚಿನ ನೋವು ತಂದಂತೆ. . ಇದು ತಪ್ಪು ಪ್ರತಿಯೊಬ್ಬರಿಗೂ ಅವರದೇ ಆದ ಜೀವನವಿದೆ,  ಎಲ್ಲರನ್ನೂ  ವೈಯಕ್ತಿಕವಾಗಿ ನೋಡಬೇಕು.  
 
ನವೆಂಬರ್ 7 ಕನ್ನಡ ಚಿತ್ರ ರಂಗಕ್ಕೆ ಕರಾಳ ದಿನ. ಆ ದಿನವನ್ನು ನೆನಪಿಸಿಕೊಂಡರೆ, ಯಾರಿಗಾದರೂ ಸಾವಿನ ಆಳವನ್ನು ಅರಿಯಲು ಹೋದಂತೆ ಭಾಸವಾಗುತ್ತದೆ. ಸಾವು ಯಾವ ಕ್ಷಣ ಬೇಕಾದರೂ ಬರಬಹುದು.  ಸಾವಿನ ತೀವ್ರತೆಯನ್ನು ಯಾರಿಂದಲೂ ಅರಿಯಲು ಸಾಧ್ಯವಿಲ್ಲ,  ಅರಿತ ಮೇಲೆ ನಮಗೆ ಹೇಳಲು ಅರಿತವರು ನಮ್ಮೊಂದಿಗೆ ಇರುವುದಿಲ್ಲ. 
 
ನವೆಂಬರ್ 7 ರಂದು ಮಾಸ್ತಿಗುಡಿ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರಿಕರಣದ ವೇಳೆ ಖಳನಟರಾದ ಅನಿಲ್ ಮತ್ತು ಉದಯ್ ಇಬ್ಬರು ಮೃತಪಟ್ಟಿದ್ದರು. ಇಡಿ ಕನಾ೯ಟಕದ ಜನತೆ ಆ 3 ದಿನ ಅಕ್ಷರಸಃ ನಲುಗಿದ್ದರು.  ಪ್ರತಿಯೊಬ್ಬರು ಇಬ್ಬರು ನಟರು ಬದುಕಿ ಬರಲೆಂದು ದೇವರ ಬಳಿ ಪ್ರಾಥಿ೯ಸುತ್ತಿ ದದ್ದು ಹೃದಯ ಹಿಂಡುವ ಬೇಡಿಕೆ ಆಗಿತ್ತು. ಪ್ರತಿ ಕ್ಷಣ ಏನಾಗಿದೇಯೊ ಏನೋ,  ಬದುಕಿದ್ದಾರೇನೊ ಎಂಬ ಒಂದು ಸಣ್ಣ ಆಸೆಯೊಂದಿಗೆ ಜನ ಟಿ. ವಿ ನೋಡುತ್ತಿದ್ದರು.   ಬಹಳಷ್ಟು ಚಿತ್ರರಂಗದ ಜನ ಆ ದಿನ ನಿದ್ದೆ ಮಾಡಿರಲಿಲ್ಲವೇನೊ!!  
 
 
 
ಚಿತ್ರರಂಗದಲ್ಲಿ ಬೆಳೆಯ ಬೇಕೆಂದು ಸಾವಿರಾರು ಕನಸುಗಳನ್ನು ಕಟ್ಟಿಕೊಂಡಿದ್ದ ಉತ್ಸಾಹಿ ಯುವಕರ ಜೀವನ, ಕೆಲವು ಬೇಜಾವಬ್ದಾರಿ ಜನರಿಂದ ಒಡೆದು ಚೂರಾಗಿ ತಿಪ್ಪಗೊಂಡನಹಳ್ಳಿ ಕೆರೆಗೆ ಸೇರಿತ್ತು. ಅನಿಲ್ ಮತ್ತು ಉದಯ್ ಕುಟುಂಬ ಈ ಘಟನೆಯಿಂದ ತತ್ತರಿಸಿತ್ತು. ಚಿತ್ರರಂಗದ ಹಲವು  ಜನ ಅನಿಲ್ ಮತ್ತು ಉದಯ್ ಕುಟುಂಬಕ್ಕೆ ಹೋಗಿ ಸಾಂತ್ವನ ಹೇಳಿದ್ದರು. 
 
ಇತ್ತಿಚೇಗೆ ಕನ್ನಡದ ಸ್ಟಾರ್ ನಟಿ ರಾಧಿಕ ಪಂಡಿತ್ ಜೊತೆ ಹಸಮಣೆ ಏರಿದ ರಾಕಿಂಗ್ ಸ್ಟಾರ್ ಯಶ್ ತಮ್ಮ ಮದುವೆ ಜೊತೆಗೆ ಒಂದು  ಒಳ್ಳೆ ಕೆಲಸ ಮಾಡಿದ್ದಾರೆ.  ತಮ್ಮ ಗೆಳೆಯರಾದ ಅನಿಲ್ ಮತ್ತು ಉದಯ್ ಕುಟುಂಬಕ್ಕೆ ತಮ್ಮ ಯಶೋಮಾಗ೯ ಫೌಂಡೇಶನ್ ವತಿಯಿಂದ ಸಹಾಯ ಮಾಡಿದ್ದಾರೆ. 
 
ಯಶ್ ರವರ ತಾಯಿ ಪುಷ್ಪ ಅನಿಲ್ ಮನೆಗೆ ತೆರಳಿ ಅನಿಲ್ ರವರ ತಾಯಿಗೆ ಸಾಂತ್ವನ ಹೇಳಿ ಅನಿಲ್ ರವರ ಇಬ್ಬರು ಮಕ್ಕಳ ವಿದ್ಯಾಬ್ಯಾಸಕ್ಕಾಗಿ ತಲಾ 2.5 ಲಕ್ಷದ  ಎಜುಕೇಶನ್ ಬಾಂಡ್  ನ್ನು  ವಿತರಿಸಿದರು. ಇಬ್ಬರು ಮಕ್ಕಳಿಗೆ ಮಾಸಿಕ ತಲಾ 1,500 ಸಿಗುತ್ತದೆ. 
 
ನಂತರ ಉದಯ್ ರವರ ಮನೆಗೆ ತೆರಳಿ,  ಉದಯ್ ರವರ ತಂದೆ,  ತಾಯಿಗೆ ಸಾಂತ್ವನ ಹೇಳಿ 1.5 ಲಕ್ಷದ ಚೆಕ್ಕನ್ನು ವಿತರಿಸಿದರು. 
 
ಯಶ್ ತಮ್ಮ ಯಶೋಮಾಗ೯ ಫೌಂಡೇಶನ್ ವತಿಯಿಂದ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತ ಬಂದಿದ್ದಾರೆ.  ಈ ಹಿಂದೆ ಕಲ್ಬುಗಿ೯ ಮತ್ತು ವಿಜಯಪುರದ ಹಳ್ಳಿಗಳಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾದಾಗ 50 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಿಸಿದ್ದರು. 
 
 ಚಿತ್ರರಂಗದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡು ಈ ಹಂತಕ್ಕೆ ತಲುಪಿರುವ ಯಶ್,  ಒಬ್ಬ ಮನುಷ್ಯನಾಗಿ ಅವರಿಗೆ ಇರುವ ಸಾಮಾಜಿಕ  ಕಳಕಳಿ ಎಲ್ಲರಿಗೂ ಮಾದರಿಯಾಗಿದೆ. ತಮ್ಮ ಯಶೋಮಾಗ೯ ಫೌಂಡೇಶನ್ ಮೂಲಕ ಇನ್ನಷ್ಟು ಸಮಾಜಮುಖಿ ಕೆಲಸ ಮಾಡವಂತಾಗಲಿ. 
 
Author : Naveen Karthru  
 

VOTE FOR BEST KANNADA ACTOR – 2016 – ವೋಟ್ ಮಾಡಿ 

UPENDRA – UPPI A ಕಿರಿಕ್ ಪಾಟಿ೯ – KIRIK PARTY KANNADA 

Leave a Reply

Your email address will not be published. Required fields are marked *